Home ಕ್ರೈಂ ನ್ಯೂಸ್ ಮದುವೆ ಮಂಟಪದಲ್ಲೇ ವಧು-ವರರ ‘ಲಿಪ್‌ಲಾಕ್’: ಹಿರಿಯರೆದುರೇ ಗಾಢ ಮುತ್ತು, ಭಾರೀ ವಿರೋಧ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಮದುವೆ ಮಂಟಪದಲ್ಲೇ ವಧು-ವರರ ‘ಲಿಪ್‌ಲಾಕ್’: ಹಿರಿಯರೆದುರೇ ಗಾಢ ಮುತ್ತು, ಭಾರೀ ವಿರೋಧ!

Share
ಮದುವೆ
Share

ಬೆಂಗಳೂರುಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ಮಿಲನವಲ್ಲ, ಅದು ಎರಡು ಕುಟುಂಬಗಳ ನಂಬಿಕೆ, ಸಂಪ್ರದಾಯ ಹಾಗೂ ಪವಿತ್ರತೆಯ ಸಂಕೇತ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸಲುವಾಗಿ ಅಥವಾ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮದುವೆ ಮಂಟಪಗಳಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಿವೆ.

ಇತ್ತೀಚೆಗೆ ಬಂಗಾಳಿ ಸಂಪ್ರದಾಯದ ವಿವಾಹ ಸಮಾರಂಭವೊಂದರಲ್ಲಿ ವಧು-ವರರು ಸಾರ್ವಜನಿಕವಾಗಿ, ಅದೂ ಪವಿತ್ರ ಮಂಟಪದಲ್ಲಿ ಪರಸ್ಪರ ‘ಲಿಪ್‌ಲಾಕ್’ (ಗಾಢ ಮುತ್ತು) ಕೊಟ್ಟುಕೊಂಡಿರುವ ಘಟನೆ ವರದಿಯಾಗಿದೆ.

ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ಹೆಸರಾದ ಭಾರತೀಯ ವಿವಾಹ ಮಹೋತ್ಸವದಲ್ಲಿ ವಧು-ವರರ ಬಹಿರಂಗ ಲಿಪ್‌ಲಾಕ್ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಂಗಾಳಿ ಮಾದರಿಯ ಮದುವೆ ಮಂಟಪದಲ್ಲಿ ನಡೆದ ಈ ಘಟನೆಯಲ್ಲಿ ನವಜೋಡಿ ಹಿರಿಯರ ಸಮ್ಮುಖದಲ್ಲೇ ಆಪ್ತವಾಗಿ ಮುತ್ತಿಕ್ಕಿಕೊಂಡಿದ್ದು, ಸಂಪ್ರದಾಯದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮದುವೆಯ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಪ್ತಪದಿ ಮುಗಿಯುವ ಹಂತದಲ್ಲಿದ್ದಾಗ, ಮಂಟಪದಲ್ಲಿ ಕುಳಿತಿದ್ದ ನವಜೋಡಿ ಹಿರಿಯರು, ಬಂಧು-ಮಿತ್ರರು ಹಾಗೂ ಕ್ಯಾಮೆರಾಗಳ ಕಣ್ಣೆದುರಲ್ಲೇ ಯಾವುದೇ ಸಂಕೋಚವಿಲ್ಲದೆ ಸುಮಾರು 35 ಸೆಕೆಂಡುಗಳ ಕಾಲ ಪರಸ್ಪರ ಮುತ್ತಿಕ್ಕಿಕೊಂಡಿದ್ದಾರೆ.

ಈ ದೃಶ್ಯವನ್ನು ಕಂಡ ಮಂಟಪದಲ್ಲಿದ್ದ ಅತಿಥಿಗಳು ಹಾಗೂ ಹಿರಿಯರು ಒಂದು ಕ್ಷಣ ದಂಗಾಗಿದ್ದಾರೆ. ವೀಡಿಯೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ವಿಡಿಯೋ ಕಾಳ್ಗಿಚ್ಚಿನಂತೆ ಹರಡಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ಹಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೆಟ್ಟಿಗರ ಆಕ್ರೋಶ ಹಾಗೂ ಚರ್ಚೆ:

ಹಿಂದೂ ವಿವಾಹ ಪದ್ಧತಿಯಲ್ಲಿ ಅಗ್ನಿಸಾಕ್ಷಿಯಾಗಿ ನಡೆಯುವ ಆಚರಣೆಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ಮಂಟಪದಲ್ಲಿ ಇಂತಹ ಬಹಿರಂಗ ಪ್ರೇಮ ಪ್ರದರ್ಶನ (PDA) ಭಾರತೀಯ ಸಂಸ್ಕೃತಿಗೆ ಶೋಭೆಯಲ್ಲ ಎಂದು ಬಹುತೇಕ ನೆಟ್ಟಿಗರು ಕಿಡಿಕಾರಿದ್ದಾರೆ. “ಶೋಭನದವರೆಗಾದರೂ ಕಾಯಬಾರದಿತ್ತಾ?” ಎಂದು ಕೆಲವರು ಗೇಲಿ ಮಾಡಿದರೆ, “ಪ್ರೀತಿ ಇರಲಿ, ಆದರೆ ಹಿರಿಯರೆದುರು ಮಿತಿ ಮೀರಿದ ವರ್ತನೆ ಸರಿಯಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವೇ ಕೆಲವರು ಇದನ್ನು ನವಜೋಡಿಯ ವೈಯಕ್ತಿಕ ಪ್ರೀತಿಯ ಕ್ಷಣ ಎಂದು ಸಮರ್ಥಿಸಿಕೊಂಡಿದ್ದಾರೆ.

  1. ಕ ಜಾಲತಾಣದಲ್ಲಿ ತೀವ್ರ ಆಕ್ರೋಶ!

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles