Home ಕ್ರೈಂ ನ್ಯೂಸ್ ‘ರೋಷನ್’ ಹೆಸರಿನಲ್ಲಿ ಪರಿಚಯಿಸಿಕೊಂಡು ಹಿಂದೂ ಯುವತಿಯೊಂದಿಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಯುವಕ: ಮುಂದೇನಾಯ್ತು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ರೋಷನ್’ ಹೆಸರಿನಲ್ಲಿ ಪರಿಚಯಿಸಿಕೊಂಡು ಹಿಂದೂ ಯುವತಿಯೊಂದಿಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಯುವಕ: ಮುಂದೇನಾಯ್ತು?

Share
ಹಿಂದೂ
Share

ಇಂದೋರ್ (ಮಧ್ಯಪ್ರದೇಶ): ಇಂದೋರ್‌ನ ಹೋಟೆಲ್‌ ಒಂದರಲ್ಲಿ ಹಿಂದೂ ಯುವತಿಯೊಂದಿಗೆ ರೂಮ್‌ನಲ್ಲಿದ್ದ ಮುಸ್ಲಿಂ ಯುವಕನೊಬ್ಬನನ್ನು ಹಿಂದೂ ಪರ ಸಂಘಟನೆ ಹಾಗೂ ಶ್ರೀ ರಜಪೂತ್ ಕರ್ಣಿ ಸೇನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೆಪ್ಟೆಂಬರ್ 5 ರಂದು ನಡೆದಿದೆ.

ಸುಳ್ಳು ಹೆಸರು ಹಾಗೂ ಇನ್‌ಸ್ಟಾಗ್ರಾಮ್ ಬಳಕೆ:

ಆರೋಪಿಯನ್ನು ಮಾಣಿಕ್‌ಬಾಗ್ ನಿವಾಸಿ ಅಹದ್ ಲಕಡಿಯಾ ಎಂದು ಗುರುತಿಸಲಾಗಿದೆ. ಹಿಂದೂ ಕಾರ್ಯಕರ್ತರ ಆರೋಪದ ಪ್ರಕಾರ, ಆರೋಪಿಯು ಮೋಮೋಸ್ ಅಂಗಡಿಯೊಂದಕ್ಕೆ ಭೇಟಿ ನೀಡುತ್ತಿದ್ದ ಯುವತಿಯರ ಇನ್‌ಸ್ಟಾಗ್ರಾಮ್ ಐಡಿಗಳನ್ನು ಸಂಗ್ರಹಿಸಿ ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದನು. ಈ ಪ್ರಕರಣದಲ್ಲೂ ಸಹ ಆತ ತನ್ನ ನಿಜವಾದ ಗುರುತನ್ನು ಮರೆಮಾಚಿ, ‘ರೋಷನ್’ ಎಂಬ ನಕಲಿ ಹೆಸರಿನಲ್ಲಿ ಹಿಂದೂ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಸಾಧಿಸಿ ಸ್ನೇಹ ಬೆಳೆಸಿದ್ದ ಎಂದು ಹೇಳಲಾಗಿದೆ.

ಹೋಟೆಲ್‌ನಲ್ಲಿ ಗಲಾಟೆ – ಪೊಲೀಸರ ಭೇಟಿ:

ಈ ವಿಷಯ ತಿಳಿದ ತಕ್ಷಣ ಶ್ರೀ ರಜಪೂತ್ ಕರ್ಣಿ ಸೇನೆಯ ರಾಜ್ಯ ಅಧ್ಯಕ್ಷ ಸುರೇಂದ್ರ ಸಿಂಗ್ ದೀಕ್ಷಿತ್, ಮಾನ್‌ಸಿಂಗ್ ರಾಜಾವತ್, ವಿನಾಯಕ್ ಶರ್ಮಾ ಹಾಗೂ ಕಪಿಲ್ ಕೌಶಲ್ ಸೇರಿದಂತೆ ಹಲವು ಕಾರ್ಯಕರ್ತರು ಅಶೋಕ ಕಾಲೋನಿ ವ್ಯಾಪ್ತಿಯಲ್ಲಿದ್ದ ಹೋಟೆಲ್‌ಗೆ ತೆರಳಿದರು. ಸ್ಥಳದಲ್ಲಿ ಗಲಾಟೆ ನಡೆದ ಬಳಿಕ ಕಾರ್ಯಕರ್ತರು ಯುವಕನನ್ನು ಹಿಡಿದು ವಿಜಯನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

ಸಹಾಯಕ ಪೊಲೀಸ್ ಕಮಿಷನರ್ ಪರಾಗ್ ಸೈನಿ ಮಾತನಾಡಿ, “ಅಶೋಕ ಕಾಲೋನಿ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಘಟನೆಗೆ ಕಾರಣ ಮತ್ತು ಇತರರ ಪಾತ್ರದ ಕುರಿತು ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles