Home ಕ್ರೀಡೆ “ಪಾಕಿಸ್ತಾನ ತಂಡದಲ್ಲಿ ಹೋರಾಟದ ಗುಣ, ದೃಢತೆಯ ಕೊರತೆಯಿದೆ”: ಎಬಿ ಡಿವಿಲಿಯರ್ಸ್ ಆಕ್ರೋಶ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

“ಪಾಕಿಸ್ತಾನ ತಂಡದಲ್ಲಿ ಹೋರಾಟದ ಗುಣ, ದೃಢತೆಯ ಕೊರತೆಯಿದೆ”: ಎಬಿ ಡಿವಿಲಿಯರ್ಸ್ ಆಕ್ರೋಶ!

Share
ಎಬಿ ಡಿವಿಲಿಯರ್ಸ್
Share

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕ್ ಆಟಗಾರರಲ್ಲಿ ಗೆಲುವಿಗಾಗಿ ಬೇಕಾದ ಹೋರಾಟದ ಮನೋಭಾವ ಮತ್ತು ದೃಢತೆಯ ಕೊರತೆಯಿದೆ ಎಂದು ಅವರು ಬಹಿರಂಗವಾಗಿ ಟೀಕಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿಡಿ, ಪಾಕಿಸ್ತಾನ ತಂಡದ ಆಟಗಾರರು ಕೇವಲ ತಮ್ಮ ಸ್ವಾರ್ಥ ಹಾಗೂ ಅಹಂಕಾರಕ್ಕಾಗಿ (Ego) ಆಡುತ್ತಿದ್ದಾರೆ ಹೊರತು ತಂಡದ ಅಗತ್ಯತೆಗಾಗಿ ಅಲ್ಲ ಎಂದು ಕಿಡಿಕಾರಿದ್ದಾರೆ. “ಪಾಕಿಸ್ತಾನದ ಬ್ಯಾಟರ್‌ಗಳು ಕಷ್ಟಪಟ್ಟು ಶ್ರಮ ಹಾಕಲು ಸಿದ್ಧರಿಲ್ಲ. ಅವರಲ್ಲಿ ಗಟ್ಸ್ ಹಾಗೂ ಹೋರಾಟದ ಗುಣದ ಕೊರತೆ ಎದ್ದು ಕಾಣುತ್ತಿದೆ” ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಳಪೆ ಆಡಳಿತ ಮತ್ತು ಪದೇ ಪದೇ ನಾಯಕತ್ವ ಹಾಗೂ ಆಟಗಾರರನ್ನು ಬದಲಾಯಿಸುವ ನೀತಿಯನ್ನೂ ಡಿವಿಲಿಯರ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಬರ್ ಅಜಮ್‌ಗೆ ತಂಡದಲ್ಲಿ ದೀರ್ಘಕಾಲಿಕಾವಧಿಯ ಅವಕಾಶ ನೀಡಿ ಬೆಂಬಲಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಅವರು, ಯುವ ಆಟಗಾರರಿಗೆ ಹಿರಿಯರೇ ಮಾದರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles