ದಾವಣಗೆರೆ: ರಾಮ ರಾಮ ಅಂದು ನುಡಿದಿತ್ತಲೆ ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ…
ಎಚ್ಚರ…
ಇದು ದಾವಣಗೆರೆ ತಾಲೂಕಿನ ಐತಿಹಾಸಿಕ ಕ್ಷೇತ್ರ ಶ್ರೀ ಆನೆಕೊಂಡ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಾಗೂ ಕಾರ್ಣಿಕೋತ್ಸವದ ಕಾರ್ಣಿಕ ನುಡಿ.
ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿರುವ ದಾವಣಗೆರೆ ನಗರದ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮತ್ತು ವರ್ಷದ ಅತ್ಯಂತ ಕುತೂಹಲಕಾರಿ ಘಟ್ಟವಾದ ‘ಕಾರ್ಣಿಕೋತ್ಸವ’ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿದೆ. ಶ್ರಾವಣ ಮಾಸದ ಕೊನೆಯ ಸೋಮವಾರದ ವಿಶೇಷ ದಿನದಂದು ಜರುಗಿದ ಈ ಧಾರ್ಮಿಕ ಆಚರಣೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ನಗರದ ಮರಡಿ ಬಸವೇಶ್ವರ ಆವರಣದಲ್ಲಿ ಜಮಾಯಿಸಿದ ಭಕ್ತರ ಸಮ್ಮುಖದಲ್ಲಿ ಈ ವರ್ಷದ ಕಾರ್ಣಿಕ ನುಡಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಕಾರ್ಣಿಕದ ನುಡಿಯ ಸಾರಾಂಶ:
“ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ: ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ!”
ನಗರದ ಮರಡಿ ಬಸವೇಶ್ವರ ಆವರಣದಲ್ಲಿ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು. ಶ್ರಾವಣದ ಕೊನೆಯ ಸೋಮವಾರ ಬಾತಿ ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ, ನಿಟ್ಟುವಳ್ಳಿಯ ಶ್ರೀ ತಾಯಿ ದುರ್ಗಾಂಬಿಕಾ ದೇವಿ ಮತ್ತು ವೆಂಕಭೋವಿ ಕಾಲೋನಿಯ ಶ್ರೀ ಕನಕದುರ್ಗದೇವಿ, ಕೊರಮರ ಕಾಲೋನಿಯ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಶ್ರೀ ಬಸವಪಟ್ಟಣ ದುರುಗಮ್ಮ, ಎಸ್. ಎಂ. ಕೃಷ್ಣ ನಗರದ ಶ್ರೀ ಗಾಳಿದುರ್ಗಮ್ಮ, ದಾವಣಗೆರೆ ಕುರುಬರಕೇರಿಯ ಶ್ರೀ ಅರಿಕೇರಮ್ಮ ದೇವಿ, ಗಾಂಧಿನಗರ ಮೂರನೇ ಕ್ರಾಸ್ ನ ಒಂದನೇ ಮುಖ್ಯ ರಸ್ತೆಯ ಶ್ರೀ ಮಲ್ಲಾಡಿ ಚೌಡೇಶ್ವರಿ ದೇವರು, ಎಸ್ ಪಿಎಸ್ ನಗರದ ಶ್ರೀ ಕುಕ್ಕುವಾಡೇಶ್ವರಿ ದೇವಿ, ಎಸ್ ಪಿಎಸ್ ನಗರದ ಶ್ರೀ ಹುಲಿಗೆಮ್ಮ ದೇವಿ, ಎಸ್. ಎಸ್. ಬಡಾವಣೆಯ ಶ್ರೀ ಭೂತಪ್ಪ ದೇವರು, ಎಲೇಬೆತೂರುವಿನ ಶ್ರೀ ದೇವಿ ದುರ್ಗಮ್ಮ, ಮುದ್ಯಾಭೋವಿಯ ಶ್ರೀ ವೆಂಕಟೇಶ್ವರ ದೇವರು, ಬಸಾಪುರದ ಶ್ರೀ ಗೋ, ಚಂದ್ರ ಮಾರಮ್ಮ, ಶ್ರೀ ನಿರುಮನೆ ಎಲ್ಲಮ್ಮ ದೇವರು, ಮುದ್ದಾಬೋವಿ ಕಾಲೋನಿ ಸೇರಿದಂತೆ ಎಲ್ಲಾ ದೇವರುಗಳು ಒಗ್ಗೂಡಿದ ಬಳಿಕ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ ನೆರವೇರಿತು.
- Anekonda Basaveshwara
- Anekonda Temple Festival
- Basaveshwara Swamy Karnika
- Davangere Jathre
- Davangere News
- Davangere Update.
- Karnataka Religious News.
- Karnika Nudi
- Maradi Basaveshwara Avirana
- Shravana Somawara
- ಆನೆಕೊಂಡ ಜಾತ್ರಾ ಮಹೋತ್ಸವ
- ಆನೆಕೊಂಡ ಬಸವೇಶ್ವರ
- ಕರ್ನಾಟಕ ದೇವಸ್ಥಾನಗಳು.
- ಕಾರ್ಣಿಕ ನುಡಿ
- ದಾವಣಗೆರೆ ಜಾತ್ರೆ
- ದಾವಣಗೆರೆ ಸುದ್ದಿ
- ಬಸವೇಶ್ವರ ಸ್ವಾಮಿ ಕಾರ್ಣಿಕ
- ಮರಡಿ ಬಸವೇಶ್ವರ ಆವರಣ
- ಶ್ರಾವಣ ಸೋಮವಾರ





Leave a comment