ಪ್ರತಿಷ್ಠಿತ ಫೆನಾನ್ಷಿಯಲ್ ಟೈಮ್ಸ್ (Financial Times – FT) ಮಾಸ್ಟರ್ಸ್ ಇನ್ ಮ್ಯಾನೇಜ್ಮೆಂಟ್ (MiM) 2026ರ ಜಾಗತಿಕ ಶ್ರೇಯಾಂಕ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಹೆಮ್ಮೆಯ ಗರಿ ಮೂಡಿದೆ. ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ (IIM Bangalore – ಐಐಎಂ ಬಿ) ತನ್ನ ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟ ಮತ್ತು ವೃತ್ತಿಪರ ಮೌಲ್ಯಗಳಿಂದ ಜಾಗತಿಕ ಮಟ್ಟದಲ್ಲಿ 21ನೇ ಸ್ಥಾನವನ್ನು ಅಲಂಕರಿಸಿದೆ.
ಐಐಎಂ ಬೆಂಗಳೂರಿನ ಅದ್ಭುತ ಏರಿಕೆ:
ಕಳೆದ ಕೆಲವು ವರ್ಷಗಳಿಂದ ಐಐಎಂ ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳುತ್ತಾ ಬಂದಿದೆ.
2024ರಲ್ಲಿ: 41ನೇ ಸ್ಥಾನ
2025ರಲ್ಲಿ: 28ನೇ ಸ್ಥಾನ
2026ರಲ್ಲಿ: ಭರ್ಜರಿ ಏರಿಕೆಯೊಂದಿಗೆ 21ನೇ ಸ್ಥಾನ
ವಿಶೇಷವೆಂದರೆ, ವಿಶ್ವದ ಅಗ್ರ 25 ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಬ್ಯುಸಿನೆಸ್ ಸ್ಕೂಲ್ ಎಂಬ ಹೆಗ್ಗಳಿಗೆ ಐಐಎಂ ಬೆಂಗಳೂರು ಪಾತ್ರವಾಗಿದೆ. ಸಂಸ್ಥೆಯ ಪಿಜಿಪಿ (PGP) ಮ್ಯಾನೇಜ್ಮೆಂಟ್ ಕೋರ್ಸ್, ವಿದ್ಯಾರ್ಥಿಗಳ ವೇತನ ಬೆಳವಣಿಗೆ (Weighted Salary), ವೃತ್ತಿಜೀವನದ ಪ್ರಗತಿ (Career Progress) ಹಾಗೂ ಹಳೆ ವಿದ್ಯಾರ್ಥಿಗಳ ಬಲವಾದ ನೆಟ್ವರ್ಕ್ನಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಪಟ್ಟಿಯಲ್ಲಿ ಇ A ಕ ಭಾರತೀಯ ಸಂಸ್ಥೆಗಳು:
ಫೆನಾನ್ಷಿಯಲ್ ಟೈಮ್ಸ್ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ 100 ಮ್ಯಾನೇಜ್ಮೆಂಟ್ ಶಾಲೆಗಳ ಪಟ್ಟಿಯಲ್ಲಿ ಭಾರತದ ಒಟ್ಟು 14 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಪ್ರಮುಖ ಸಂಸ್ಥೆಗಳ ವಿವರ ಹೀಗಿದೆ:
SPJIMR (ಮುಂಬೈ): ಜಾಗತಿಕ ಮಟ್ಟದಲ್ಲಿ 26ನೇ ಸ್ಥಾನ
ಐಐಎಂ ಅಹಮದಾಬಾದ್: ಜಾಗತಿಕ ಮಟ್ಟದಲ್ಲಿ 27ನೇ ಸ್ಥಾನ
ಎಕ್ಸ್ಎಲ್ಆರ್ಐ (XLRI – ಜಮ್ಶೆಡ್ಪುರ): ಜಾಗತಿಕ ಮಟ್ಟದಲ್ಲಿ 33ನೇ ಸ್ಥಾನ
ಐಐಎಂ ಕಲ್ಕತ್ತಾ: ಜಾಗತಿಕ ಮಟ್ಟದಲ್ಲಿ 39ನೇ ಸ್ಥಾನ
ಇದಲ್ಲದೆ, ಐಐಎಂ ಕೋಝಿಡೋಡ್ (54ನೇ), ಐಐಎಂ ಇಂದೋರ್ (62ನೇ), ಎಂಡಿಐ ಗುರಾವ್ಗಾಂವ್ (67ನೇ), ಐಐಎಂ ಲಕ್ನೋ (72ನೇ), ಎನ್ಎಂಐಎಂಎಸ್ ಮುಂಬೈ (73ನೇ), ಐಐಎಂ ಉದಯಪುರ (83ನೇ), ಐಎಂಐ ದೆಹಲಿ (90ನೇ) ಮತ್ತು ಟಿಎಪಿಎಂಐ (TAPMI – 98ನೇ) ಸ್ಥಾನಗಳನ್ನು ಪಡೆದು ಭಾರತದ ಮ್ಯಾನೇಜ್ಮೆಂಟ್ ಶಿಕ್ಷಣದ ಬಲವನ್ನು ಜಗತ್ತಿಗೆ ಸಾರಿದ್ದಾರೆ.
ಜಾಗತಿಕ ಅಗ್ರ ಸ್ಥಾನಗಳು:
ವಿಶ್ವದ ಒಟ್ಟಾರೆ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳ ಪೈಕಿ:
ಸ್ವಿಟ್ಜರ್ಲೆಂಡ್ ದೇಶದ ‘ಯೂನಿವರ್ಸಿಟಿ ಆಫ್ ಸೇಂಟ್ ಗ್ಯಾಲೆನ್’ (University of St Gallen) ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.
ಪೋರ್ಚುಗಲ್ನ ‘ನೋವಾ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಎಕನಾಮಿಕ್ಸ್’ ಎರಡನೇ ಸ್ಥಾನದಲ್ಲಿದೆ.
ಚೀನಾದ ‘ಶಾಂಘೈ ಜಿಯಾಂಗ್ ಟಾಂಗ್ ವಿಶ್ವವಿದ್ಯಾಲಯದ ಆಂಟೈ ಕಾಲೇಜು’ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಮೌಲ್ಯಮಾಪನ ಮಾನದಂಡಗಳು:
ಈ ಜಾಗತಿಕ ರ್ಯಾಂಕಿಂಗ್ ಅನ್ನು ನಿರ್ಧರಿಸುವಾಗ ಫೆನಾನ್ಷಿಯಲ್ ಟೈಮ್ಸ್ ಸಂಸ್ಥೆಯು ಸುಮಾರು 19 ಪ್ರಮುಖ ಮಾನದಂಡಗಳನ್ನು ಪರಿಗಣಿಸುತ್ತದೆ. ಇದರಲ್ಲಿ ಪದವಿಯ ನಂತರದ ಉದ್ಯೋಗಾವಕಾಶಗಳು, ವೇತನದಲ್ಲಿನ ಏರಿಕೆ, ಹೂಡಿಕೆಗೆ ತಕ್ಕ ಪ್ರತಿಫಲ (Value for Money), ಅಂತರರಾಷ್ಟ್ರೀಯ ಮಾನ್ಯತೆ, ಲಿಂಗ ಸಮಾನತೆ (Gender Diversity) ಮತ್ತು ಹಸಿರು ಇಂಧನ/ಸುಸ್ಥಿರತೆ (ESG Net Zero)Initiatives ಮುಂತಾದ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.





Leave a comment