ದಾವಣಗೆರೆ:ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಭದ್ರಾ ಡ್ಯಾಂ ಒಳಹರಿವಿನಲ್ಲಿ ಸ್ಥಿರತೆ ಕಂಡುಬಂದಿದೆ. ಪ್ರಸ್ತುತ ಜಲಾಶಯಕ್ಕೆ 2,847 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು 1,700 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಬಲದಂಡೆ ನಾಲೆಗೆ 1,500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ಭದ್ರಾ ಜಲಾಶಯದ ಒಳಹರಿವಿನಲ್ಲಿ ಯಥಾ ಸ್ಥಿತಿ ಇದೆ. ಡ್ಯಾಂಗೆ ಇಂದು 2847 ಕ್ಯೂಸೆಕ್ ಒಳಹರಿವಿದೆ. ಹೊರ ಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಿಂದ 1700 ಕ್ಯೂಸೆಕ್ ಹೊರ ಹರಿವಿದೆ.
ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಒಳಹರಿವು 2847 ಕ್ಯೂಸೆಕ್ ಇದ್ದರೆ, ಬಲದಂಡೆ ನಾಲೆಯಲ್ಲಿ 1500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಕಡಿಮೆ ಇದೆ. ಜಲಾಶಯ ಭರ್ತಿಗೆ ಇನ್ನು ಕೇವಲ 7.5 ಅಡಿ ನೀರು ಮಾತ್ರ ಬರಬೇಕು.
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
ಜಲಾಶಯದ ಇಂದಿನ ನೀರಿನ ಮಟ್ಟ: 178.7 ಅಡಿ
ಒಳಹರಿವು: 2847ಕ್ಯೂಸೆಕ್
ಭದ್ರ ಬಲದಂಡೆ ನಾಲೆಗೆ: 1500 ಕ್ಯೂಸೆಕ್
ಸ್ಟೋರೇಜ್ ಕೆಪಾಸಿಟಿ: 62.507 ಟಿಎಂಸಿ
ಇದೇ ದಿನ ಜಲಾಶಯದ ಕಳೆದ ವರ್ಷದ ನೀರಿನ ಮಟ್ಟ:
ನೀರಿನ ಮಟ್ಟ: 184.3 ಅಡಿ
ಒಳ ಹರಿವು: 16,534 ಕ್ಯೂಸೆಕ್
ಹೊರ ಹರಿವು: 14,138 ಕ್ಯೂಸೆಕ್
ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 178.7 ಅಡಿಯಷ್ಟಿದೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 7.5 ಅಡಿ ನೀರು ಬರಬೇಕಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 184.3 ಅಡಿ ಇತ್ತು ಹಾಗೂ 16,534 ಕ್ಯೂಸೆಕ್ ಒಳಹರಿವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಮಟ್ಟ ಸುಮಾರು 6 ಅಡಿಗಳಷ್ಟು ಕಡಿಮೆಯಾಗಿದೆ.
ಇನ್ನೊಂದೆಡೆ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಭಾಗಕ್ಕೆ ನೀರು ಹರಿಸಲು ತೀರ್ಮಾನಿಸಿರುವುದರಿಂದ ಮುಂದಿನ ದಿನಗಳಲ್ಲಿ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ತಮ್ಮ ಜಮೀನುಗಳಿಗೆ ಹಾಗೂ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲೆಯ ರೈತರು ಬಂದ್, ಧರಣಿ ಮತ್ತು ವಿವಿಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದಾಗ್ಯೂ, ಕಾಡಾ (CADA) ಹಾಗೂ ಸಿಇಸಿ (CEC) ಸಭೆ ನಡೆಸಿ ನೀರು ಬಿಡುಗಡೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳದಿರುವುದು ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.





Leave a comment