ಕೊಡಗು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವೊಂದು ಒದಗಿಬಂದಿದೆ. ಕೊಡಗು-ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ಬೆರಳಚ್ಚುಗಾರ (Typist), ಚಾಲಕ (Driver), ಆದೇಶಿಕ ಜಾರಿಕಾರ (Process Server) ಹಾಗೂ ಜವಾನ/ಸೇವಕ (Peon/Office Attender) ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ:
ಬೆರಳಚ್ಚುಗಾರರು (Typist): 08 ಹುದ್ದೆಗಳು – (ವೇತನ: ₹34,100 – ₹67,600/-)
ಚಾಲಕರು (Driver): 02 ಹುದ್ದೆಗಳು – (ವೇತನ: ₹34,100 – ₹67,600/-)
ಆದೇಶಿಕ ಜಾರಿಕಾರರು (Process Server): 06 ಹುದ್ದೆಗಳು – (ವೇತನ: ₹31,775 – ₹61,300/-)
ಜವಾನ/ಸೇವಕ (Peon/Office Attender): 23 ಹುದ್ದೆಗಳು – (ವೇತನ: ₹27,000 – ₹46,675/-)
ಶೈಕ್ಷಣಿಕ ಅರ್ಹತೆ:
ಬೆರಳಚ್ಚುಗಾರರು: ದ್ವಿತೀಯ PUC ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಪಾಸಾಗಿರಬೇಕು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ಶ್ರೇಣಿ (Senior Grade) ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಚಾಲಕರು: SSLC/10ನೇ ತರಗತಿ ಪಾಸಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಗಿ (Heavy Vehicle DL) ಹೊಂದಿರಬೇಕು.
ಆದೇಶಿಕ ಜಾರಿಕಾರರು: SSLC ಪಾಸಾಗಿರಬೇಕು (ವಾಹನ ಚಾಲನಾ ಪರವಾನಗಿ ಹೊಂದಿದವರಿಗೆ ಆದ್ಯತೆ).
ಜವಾನ/ಸೇವಕ: SSLC/10ನೇ ತರಗತಿ ಪಾಸಾಗಿರಬೇಕು ಮತ್ತು ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.
ವಯೋಮಿತಿ (03-10-2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ ವಯಸ್ಸು: 18 ವರ್ಷ
ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 43 ವರ್ಷ
ಪ.ಜಾ/ಪ.ಪಂ/ಪ್ರವರ್ಗ-1: ಗರಿಷ್ಠ 45 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ₹300
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹150
SC/ST/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 03-09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-10-2026 (ರಾತ್ರಿ 11:59 ರವರೆಗೆ)
ಅರ್ಹ ಅಭ್ಯರ್ಥಿಗಳು ಕೊಡಗು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ kodagu.dcourts.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಹುದ್ದೆಗಳಿಗೆ ತಕ್ಷಣವೇ ಅರ್ಜಿ ಸಲ್ಲಿಸಿ.
- Apply Online Kodagu Court
- Karnataka Govt Jobs 2026
- Kodagu District Court Recruitment 2026
- Kodagu eCourt Jobs
- Madikeri Court Vacancy
- Peon Driver Jobs Kodagu
- SSLC ಪಾಸಾದವರಿಗೆ ಕೆಲಸ
- Typist Recruitment Karnataka
- ಕರ್ನಾಟಕ ಸರ್ಕಾರಿ ಉದ್ಯೋಗಗಳು
- ಕೊಡಗು ಕೋರ್ಟ್ ಜವಾನ ಹುದ್ದೆ
- ಕೊಡಗು ಜಿಲ್ಲಾ ನ್ಯಾಯಾಲಯ ನೇಮಕಾತಿ 2026
- ಚಾಲಕ ಹುದ್ದೆ ಅರ್ಜಿ
- ಜಿಲ್ಲಾ ನ್ಯಾಯಾಲಯ ಹುದ್ದೆಗಳು
- ಬೆರಳಚ್ಚುಗಾರ ನೇಮಕಾತಿ
- ಮಡಿಕೇರಿ ಉದ್ಯೋಗ ಸುದ್ದಿ





Leave a comment