ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಿವಗೋಷ್ಠಿ ಅಧ್ಯಕ್ಷ ಮಾಗನೂರು ಸೋಮಶೇಖರ ಗೌಡ್ರು ವಿಧಿವಶ

On: February 28, 2025 7:23 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-02-2025

ದಾವಣಗೆರೆ: ಬೆಂಗಳೂರು ನಿವಾಸದಲ್ಲಿ ಶಿವಗೋಷ್ಠಿ ಅಧ್ಯಕ್ಷರಾಗಿದ್ದ ಮಾಗನೂರು ಸೋಮಶೇಖರ ಗೌಡ್ರು ವಿಧಿವಶರಾಗಿದ್ದಾರೆ.

ಮೃತರಿಗೆ 88 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು ಹಾಗೂ ಮೊಮ್ಮಕ್ಕಳು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಅಂತಿಮ ಸಂಸ್ಕಾರವನ್ನು ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಅಪಾರ ಬಂಧು ಬಳಗದ ಸಮ್ಮುಖದಲ್ಲಿ ನೆರವೇರಿಸಲಾಯಿತು ಎಂದು ಅವರ ಸಹೋದರ ಮಾಗನೂರು ಸಂಗಮೇಶ್ವರ ಗೌಡ್ರವರು ತಿಳಿಸಿದ್ದಾರೆ.

ಮಾಗನೂರು ಸೋಮಶೇಖರ ಗೌಡ್ರು ಲಿಂಗೈಕ್ಯ ಮಾಗನೂರು ಬಸಪ್ಪ ಮತ್ತು ಲಿಂಗೈಕ್ಯ ಸರ್ವಮಂಗಳಮ್ಮ ದ್ವಿತೀಯ ಪುತ್ರರಾಗಿದ್ದರು. ಇವರು ಚೌಕಿಪೇಟೆಯಲ್ಲಿ ಮಾಗನೂರು ಬಸಪ್ಪ ಅಂಡ್ ಸನ್ಸ್ ಎಂಬ ಹೆಸರಿನಲ್ಲಿ ಸುಪ್ರಸಿದ್ಧ ವರ್ತಕರಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಅಕ್ಕಿ ಉದ್ಯಮವನ್ನು ಸಹ ಸ್ಥಾಪಿಸಿದ್ದರು.

ಅವರು ಸಾರ್ವಜನಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ತರಳಬಾಳು ಬಡಾವಣೆಯಲ್ಲಿ 30 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಶಿವ ಗೋಷ್ಠಿ ಸಮಿತಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.

ಶ್ರೀ ತರಳಬಾಳು ಜಗದ್ಗುರುಗಳ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದರು. ಶಿವಗೋಷ್ಠಿ ಸಮಿತಿಯ ಆಶ್ರಯದಲ್ಲಿ ಅನೇಕ ಜನಮುಖಿ ಹಾಗೂ ಶರಣ ಜಯಂತಿ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾ ಅಪಾರ ಮೆಚ್ಚುಗೆ ಪಡೆದಿದ್ದರು. ಅವರ ನಿಧನದಿಂದ ಶಿವ ಗೋಷ್ಠಿ ಸಮಿತಿಯವರು ಅವರ ಸಾಧನೆಯನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಜಿಲ್ಲಾ ಕಸಾಪ ಕಂಪನಿ:

ಮಾಗನೂರು ಸೋಮಶೇಖರ ಗೌಡ್ರು ಅವರು ನಗನೂರು ಸೋಮಶೇಖರ ಗೌಡರ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರಾಗಿದ್ದು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಹೊರ ಮಾರ್ಗದರ್ಶನದಿಂದ ಅನೇಕ ಸಾಹಿತಿಕ ಚಟುವಟಿಕೆಗಳನ್ನು ನಡೆಸಲು ಮಾರ್ಗದರ್ಶನ ನೀಡುತ್ತಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment