Home ದಾವಣಗೆರೆ ದಾವಣಗೆರೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಜರುಗಿದ ಮಂಗಳ ಗೌರಿ ಪೂಜೆ: 11 ಮುತ್ತೈದೆಯರಿಗೆ ಬಾಗೀನ ಸಮರ್ಪಣೆ
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಜರುಗಿದ ಮಂಗಳ ಗೌರಿ ಪೂಜೆ: 11 ಮುತ್ತೈದೆಯರಿಗೆ ಬಾಗೀನ ಸಮರ್ಪಣೆ

Share
ದಾವಣಗೆರೆ
Share

ದಾವಣಗೆರೆ: ನಗರದ ಕೆ. ಬಿ. ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪವಿತ್ರ ಮಂಗಳ ಗೌರಿ ಹಬ್ಬವನ್ನು ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ನಾಡಿನ ಅಭಿವೃದ್ಧಿ ಹಾಗೂ ಸಮೃದ್ಧಿಗಾಗಿ ಮಂಗಳ ಗೌರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪೂಜಾ ಕೈಂಕರ್ಯದಲ್ಲಿ, ಧಾರ್ಮಿಕ ವಿಧಿ-ವಿಧಾನಗಳಂತೆ 11 ಮುತ್ತೈದೆಯರಿಗೆ ಗೌರವಪೂರ್ವಕವಾಗಿ ಬಾಗೀನ ಸಮರ್ಪಿಸಲಾಯಿತು. ಮಂಗಳ ಗೌರಿ ದೇವಿಯ ಅಪಾರ ಕೃಪೆ ಹಾಗೂ ಆಶೀರ್ವಾದ ನಾಡಿನ ಪ್ರತಿಯೊಂದು ಮನೆ-ಮನಗಳನ್ನು ತಲುಪಲಿ, ರಾಜ್ಯದ ಎಲ್ಲಾ ಜನರಿಗೆ ಸದಾ ಸಂತೋಷ, ಉತ್ತಮ ಆರೋಗ್ಯ, ಸಮೃದ್ಧಿ, ಐಶ್ವರ್ಯ ಮತ್ತು ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ್, ಪ್ರಮುಖ ನಾಯಕರಾದ ಹೆಚ್. ಸಿ. ಜಯಮ್ಮ, ಶೋಭಾ, ಬಿಜೆಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜಶೇಖರ್, ವೀಣಾ ನಂಜಪ್ಪ, ಜಯಲಕ್ಷ್ಮಿ ಮಹೇಶ್, ರೇಣುಕಾ ಕೃಷ್ಣ, ಗೌರಮ್ಮ ಪಾಟೀಲ್, ಅಶ್ವಿನಿ, ಮಮತಾ, ದೂಡಾ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಮಂಜುಳಾ ಹಾಗೂ ದೇವಿರಮ್ಮ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು. ಪೂಜೆಯ ನಂತರ ಭಾಗವಹಿಸಿದ್ದ ಮಹಿಳೆಯರಿಗೆ ಪುಷ್ಪ ತಾಂಬೂಲ ವಿತರಿಸಲಾಯಿತು.

Share

Leave a comment

Leave a Reply

Your email address will not be published. Required fields are marked *