Home ಕ್ರೈಂ ನ್ಯೂಸ್ ರೆಡ್ ಫೋರ್ಟ್ ಬ್ಲಾಸ್ಟ್ ತನಿಖೆ ಹೆಸರಲ್ಲಿ ದೋಚಿ ದೆಹಲಿ ವೃದ್ಧ ದಂಪತಿಗೆ ₹30 ಲಕ್ಷ ವಂಚನೆ: 7 ದಿನ ‘ಡಿಜಿಟಲ್ ಅರೆಸ್ಟ್’ ಮಾಡಿದ್ದ ಸೈಬರ್ ಗ್ಯಾಂಗ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೆಡ್ ಫೋರ್ಟ್ ಬ್ಲಾಸ್ಟ್ ತನಿಖೆ ಹೆಸರಲ್ಲಿ ದೋಚಿ ದೆಹಲಿ ವೃದ್ಧ ದಂಪತಿಗೆ ₹30 ಲಕ್ಷ ವಂಚನೆ: 7 ದಿನ ‘ಡಿಜಿಟಲ್ ಅರೆಸ್ಟ್’ ಮಾಡಿದ್ದ ಸೈಬರ್ ಗ್ಯಾಂಗ್!

Share
ಡಿಜಿಟಲ್ ಅರೆಸ್ಟ್
Share

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೆಂಪುಕೋಟೆ ಸ್ಫೋಟ ಪ್ರಕರಣದಲ್ಲಿ ಉಗ್ರರಿಗೆ ಹಣಕಾಸಿನ ನೆರವು ನೀಡಿದ್ದೀರಾ ಎಂದು ಹೆದರಿಸಿ, 74 ವರ್ಷದ ನಿವೃತ್ತ ರೈಲ್ವೆ ಉದ್ಯೋಗಿ ಹಾಗೂ ಅವರ ಪತ್ನಿಯನ್ನು ಸತತ 7 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest) ನಲ್ಲಿಟ್ಟು ಖದೀಮರು ಬರೋಬ್ಬರಿ 30 ಲಕ್ಷ ರೂಪಾಯಿ ದೋಚಿದ್ದಾರೆ.

ಘಟನೆಯ ವಿವರ:

ದ್ವಾರಕಾದ ನಿವಾಸಿಗಳಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ ವಂಚಕರು, ತಾವು ಎನ್‌ಐಎ (NIA) ಮತ್ತು ಎಟಿಎಸ್ (ATS) ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಬ್ಯಾಂಕ್ ಖಾತೆಯಿಂದ ಉಗ್ರರಿಗೆ ಹಣ ವರ್ಗಾವಣೆಯಾಗಿದೆ ಎಂದು ಭೀತಿ ಹುಟ್ಟಿಸಿದ್ದರು. 7 ದಿನಗಳ ಕಾಲ ಸತತ ವಿಡಿಯೋ ಕರೆಗಳ ಮೂಲಕ ದಂಪತಿಯನ್ನು ನಿಗಾದಲ್ಲಿಟ್ಟು, ಯಾರೊಂದಿಗೂ ಮಾತನಾಡದಂತೆ ಬೆದರಿಸಿದ್ದರು. ಅಲ್ಲದೆ, ವಾಟ್ಸಾಪ್ ಮೂಲಕ ನಕಲಿ ರಹಸ್ಯ ಒಪ್ಪಂದ ಪತ್ರ (Confidentiality Agreement) ಕಳುಹಿಸಿ ಸಹಿ ಮಾಡಿಸಿದ್ದರು.

ಬಳಿಕ ಬ್ಯಾಂಕ್ ಖಾತೆಗಳ ಪರಿಶೀಲನೆ ಹೆಸರಿನಲ್ಲಿ ತಮ್ಮ ನಿಶ್ಚಿತ ಠೇವಣಿ (FD) ಹಣವನ್ನು ಆರ್‌ಬಿಐ ಅನುಮೋದಿತ ಖಾತೆಗೆ ಪಾವತಿಸುವಂತೆ ತಿಳಿಸಿ 30 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ನಕಲಿ ಆರ್‌ಬಿಐ ರಸೀದಿ ಕಳುಹಿಸಿದ ನಂತರ ಸೈಬರ್ ವಂಚಕರು ಸಂಪರ್ಕಕ್ಕೆ ಸಿಗದೇ ಹೋದಾಗ ದಂಪತಿಗೆ ತಾವೇ ಮೋಸ ಹೋಗಿರುವುದು ಅರಿವಾಗಿದೆ.

ಆರೋಪಿ ಬಂಧನ – 12 ಲಕ್ಷ ರೂ. ಜಪ್ತಿ:

ಪ್ರಕರಣದ ತನಿಖೆ ನಡೆಸಿದ ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ತಂಡ, ಸೈಬರ್ ಖದೀಮರ ಹಣ ವರ್ಗಾವಣೆಯ ಮೂಲವನ್ನು ಬೆನ್ನಟ್ಟಿ ಹರಿಯಾಣದ ಫತೇಹಾಬಾದ್ ನಿವಾಸಿ ಸುನಿಲ್ ಸಿಂಗ್ಲಾ ಎಂಬಾತನನ್ನು ಬಂಧಿಸಿದೆ. ಈತನ ಬ್ಯಾಂಕ್ ಖಾತೆಯ ಮೂಲಕ 1 ಕೋಟಿಗೂ ಹೆಚ್ಚು ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ಕಾರ್ಯಪ್ರವೃತ್ತರಾದ ಪೊಲೀಸರು ವಂಚನೆಗೊಳಗಾದ 30 ಲಕ್ಷ ರೂ. ಪೈಕಿ 12 ಲಕ್ಷ ರೂಪಾಯಿಯನ್ನು ಯಶಸ್ವಿಯಾಗಿ ತಡೆಹಿಡಿದು ಸಂತ್ರಸ್ತರಿಗೆ ಮರಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles