SUDDIKSHANA KANNADA NEWS/ DAVANAGERE/ DATE:09-09-2023
ದಾವಣಗೆರೆ: ದಾವಣಗೆರೆ ತಾಲೂಕಿನ ದೊಡ್ಡ ಒಬ್ಬಜ್ಜಹಳ್ಳಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪ್ರತಿವರ್ಷವೂ ಬಂಜಾರ (Banjara) ಸಮುದಾಯದವರು ಕೈಯಲ್ಲಿ ಸಸಿ ತೆನೆ ಇಟ್ಟುಕೊಂಡು ಜಾನಪದ ನೃತ್ಯ ಮಾಡಿ ಸಂತೋಷ ಪಡುತ್ತಾರೆ.
ಗೋಕುಲಾಷ್ಟಮಿಯಂದು ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ.
ಈ ಸುದ್ದಿಯನ್ನೂ ಓದಿ:

Kalaburagi: ಇಲ್ಲಿಂದ ದೆಹಲಿಗೆ ಕಳ್ಸಿದ್ರಿ, ಮತ್ತೆ ಇಲ್ಲಿಗೆ ಬರ್ಬೇಕು ಅಂತೀರಿ: ಕಲಬುರಗಿಯಿಂದ ಲೋಕಸಭೆಗೆ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸೋ ಬಗ್ಗೆ ಒಗಟಿನ ಮಾತು..!
ಈ ಬಾರಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು
ಗ್ರಾಮಸ್ಥರು ಆಹ್ವಾನಿಸಿದ್ದರು. ಅದರಂತೆ ಆಗಮಿಸಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ಬಂಜಾರ (Banjara) ಸಮುದಾಯದ ಸಾಂಪ್ರಾದಾಯಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಿದ್ದ ಮಹಿಳೆಯರು ಪ್ರಭಾ ಮಲ್ಲಿಕಾರ್ಜುನ್ ಅವರಿಗೂ ನೃತ್ಯ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಬಂಜಾರ (Banjara) ಸಮುದಾಯದ ಸಾಂಪ್ರಾದಾಯಿಕ ಸೀರೆ ನೀಡಿ, ಕೈಗೆ ಸಸಿ ತೆನೆಗಳನ್ನು ನೀಡಿದರು. ಸಸಿ ತೆನೆ ಹಿಡಿದು ಪ್ರಭಾ ಅವರೂ ಸಹ ಮಹಿಳೆಯರ ಜೊತೆ ಹೆಜ್ಜೆ ಹಾಕಿದರು. ಪ್ರಭಾ ಮಲ್ಲಿಕಾರ್ಜುನ್ ಅವರು ನೃತ್ಯ ಮಾಡುತ್ತಿದ್ದಂತೆ ಬಂಜಾರ (Banjara) ಸಮುದಾಯದ ಮಹಿಳೆಯರೂ ಸಹ ಸಖತ್ತಾಗಿಯೇ ಸ್ಟೆಪ್ ಹಾಕಿದರು.
ಬಳಿಕ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್ ಅವರು, ನಾವು ಸಹ ಗ್ರಾಮಸ್ಥರ ಪರವಾಗಿರುತ್ತೇವೆ. ಸದಾ ನಿಮ್ಮ ಜೊತೆಯಲ್ಲಿರುತ್ತೇವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ನಿಮ್ಮ ಪರ ಸದಾ ಇರುತ್ತೇವೆ. ಶ್ರೀಕೃಷ್ಣ ಪರಮಾತ್ಮ ಎಲ್ಲರಿಗೂ
ಸುಖ, ಶಾಂತಿ, ನೆಮ್ಮದಿ ನೀಡಲಿ. ಈ ಬಾರಿ ಮಳೆ, ಬೆಳೆ ಸರಿಯಾಗಿ ಆಗಿಲ್ಲ. ಮಳೆ ಹಾಗೂ ಬೆಳೆ ಚೆನ್ನಾಗಿ ಆಗಲಿ. ಎಲ್ಲರಿಗೂ ಗೋಕುಲಾಷ್ಟಮಿಯ ಶುಭಾಶಯಗಳು ಎಂದು ಹೇಳಿದರು.
ಪ್ರಭಾ ಮಲ್ಲಿಕಾರ್ಜುನ್ ಅವರು ಈಗ ಹೆಚ್ಚು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಈಗ ಬಂಜಾರ (Banjara) ಸಮುದಾಯದವರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. ಶ್ರೀಕೃಷ್ಮ ಜನ್ಮಾಷ್ಟಮಿಯ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಈ ಮೂಲಕ ಅವರ ಜೊತೆ ಬೆರೆಯುವ ಕೆಲಸವನ್ನೂ ಮಾಡಿದ್ದಾರೆ.