Home ದಾವಣಗೆರೆ 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ತಕ್ಷಣ ಅರ್ಜಿ ಸಲ್ಲಿಸಿ
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ತಕ್ಷಣ ಅರ್ಜಿ ಸಲ್ಲಿಸಿ

Share
ಅಂಚೆ
Share

ದಾವಣಗೆರೆ: ಶಿವಮೊಗ್ಗ,ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ಅಂಚೆ ವಿಭಾಗದಲ್ಲಿ ಒಟ್ಟು 55 ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು18 ರಿಂದ 40 ವರ್ಷ (ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ)ದೊಳಗಿನವರಾಗಿದ್ದು, 10 ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು ಹಾಗೂ 10ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

10ನೇ ತರಗತಿಯ ಅಂಕಗಳ ಆಧಾರದ ಮೇಲೆ ಆನ್‌ಲೈನ್ ಮೂಲಕವೇ ನೇಮಕಾತಿ ನಡೆಯಲಿದೆ.

ಅರ್ಜಿ ನೋಂದಣಿಗೆ ಕೊನೆಯ ದಿನಾಂಕ: 21.09.2026 ಆಗಿದ್ದು, ಅರ್ಜಿ ತಿದ್ದುಪಡಿ ಹಾಗೂ ಶುಲ್ಕ ಪಾವತಿಗೆ ದಿನಾಂಕ: 23.09.2026 ರಿಂದ 24.09.2026 ಅವಕಾಶವಿರುತ್ತದೆ.

ಅರ್ಹ ಅಭ್ಯರ್ಥಿಗಳು https://indiapost.gov.in/gdsonlineengagement ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಶಿವಮೊಗ್ಗ ವಿಭಾಗದ ಅಂಚೆ ಕಚೇರಿ ಹಾಗೂಸಂಪರ್ಕ ಸಂಖ್ಯೆ: 08182-222835 / 222516 ಸಂಪರ್ಕಿಸಬಹುದು ಎಂದು‌ ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles