ಆಗರ್ ಮಾಲ್ವಾ (ಮಧ್ಯಪ್ರದೇಶ): ಪ್ರಸಿದ್ಧ ಯುಟ್ಯೂಬರ್ ಛವಿ ವರ್ಷ್ಣೇ (23) ಹಾಗೂ ಅವರ ತಾಯಿ ಸಾರಿಕಾ (50) ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಮಂಗಳವಾರ ಮುಂಜಾನೆ ಉಜ್ಜಯಿನಿ-ಗರೋಠ್ ಚತುಷ್ಪಥ ರಸ್ತೆಯ ರಾಮಾಖೇಡಿ ಗ್ರಾಮದ ಬಳಿ ನಡೆದಿದೆ.
ಉತ್ತರಪ್ರದೇಶದ ಹಾಥರಸ್ ಮೂಲದ ಛವಿ ವರ್ಷ್ಣೇ ತಮ್ಮ ಕುಟುಂಬದೊಂದಿಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ದರ್ಶನಕ್ಕಾಗಿ ತೆರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಇರ್ಟಿಗಾ ಕಾರು ವೇಗವಾಗಿ ತೆರಳಿ ಮುಂದೆ ಸಾಗುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಛವಿ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಛವಿ ಅವರ ತಂದೆ ಶ್ಯಾಮ್‌ಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಚಾಲಕ ಸಚಿನ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛವಿ ವರ್ಷ್ಣೇ ಅವರು ಯೂಟ್ಯೂಬ್‌ನಲ್ಲಿ 7 ಲಕ್ಷಕ್ಕೂ ಅಧಿಕ ಚಂದಾದಾರರನ್ನು (Subscribers) ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ವ್ಲಾಗ್‌ಗಳು ಹಾಗೂ ಗೇಮಿಂಗ್ ವೀಡಿಯೊಗಳ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು. ಬಾರೋದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- Agar Malwa accident
- Chhavi Varshney
- Chhavi Varshney accident
- Madhya Pradesh road accident
- Mahakal darshan accident
- Ujjain highway accident
- YouTuber accident news
- YouTuber Chhavi Varshney death
- ಉಜ್ಜಯಿನಿ ರಸ್ತೆ ಅಪಘಾತ
- ಛವಿ ವರ್ಷ್ಣೇ
- ಮಧ್ಯಪ್ರದೇಶ ರಸ್ತೆ ಅಪಘಾತ
- ಯುಟ್ಯೂಬರ್ ಛವಿ ವರ್ಷ್ಣೇ ಸಾವು
- ಯೂಟ್ಯೂಬರ್ ರಸ್ತೆ ಅಪಘಾತ
- ರಸ್ತೆ ಅಪಘಾತ
- ಸುದ್ದಿ





Leave a comment