SUDDIKSHANA KANNADA NEWS/ DAVANAGERE/ DATE:11-02-2025
ದಾವಣಗೆರೆ: 2023ರ ಮುಂಗಾರು ಹಂಗಾಮಿನಲ್ಲಿ ರೈತರು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ವಿಮಾ ಸಂಸ್ಥೆಯವರು ಪರಿಶೀಲಿಸಿ ದಾವಣಗೆರೆ ತಾಲ್ಲೂಕಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 280 ರೈತರ ವಿಮಾ ಪಾಲಿಸಿ ತಿರಸ್ಕರಿಸಲಾಗಿದೆ.
ವಿಮೆ ಮಾಡಿಸಿರುವ ರೈತರು ಆಕ್ಷೇಪಣೆಗಳನ್ನು ಮೂಲ ದಾಖಲೆಗಳಾದ 2023-24ರ ಪಹಣಿ, ಬೆಂಬಲ ಬೆಲೆಯ ರಶೀದಿ, ಎಪಿಎಂಸಿ ಮಾರುಕಟ್ಟೆಯ ದಾಖಲೆ ರಸೀದಿಯನ್ನು ಫೆಬ್ರವರಿ 28 ರೊಳಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.