SUDDIKSHANA KANNADA NEWS/ DAVANAGERE/ DATE:10-02-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಬಸವಪಟ್ಟಣ ಸೇರಿದಂತೆ ವಿವಿಧೆಡೆ 12 ಮನೆಗಳಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಲಾಕ್ ಮಾಡಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಯೊಳಗೆ ನುಗ್ಗಿ ಕಳವು ಮಾಡಲಾಗಿದೆ.
ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವಾಪಟ್ಟಣ, ಮಾರಬನಹಳ್ಳಿ ಸೇರಿದಂತೆ ಕೆಲವು ಕಡೆ ಕಳ್ಳತನ ಆಗಿದ್ದು, ಮಾರಬನಹಳ್ಳಿ ಗ್ರಾಮದಲ್ಲಿ ಕಳ್ಳರು ಕಳ್ಳತನ ಮಾಡಲು ಉಪಯೋಗಿಸಿದ್ದ ಬೈಕ್ ಪತ್ತೆಯಾಗಿದ್ದು, ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಹಿಡಿಯುವುದಾಗಿ ಎಸ್ಪಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆದ ಮನೆಗಳಿಗೆ ಎಸ್ಪಿ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಮಾಹಿತಿ ನೀಡಿದ್ದಾರೆ.
12 ಕಡೆ ಮನೆ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲೆಲ್ಲಿ ಲಾಕ್ ಆಗಿದ್ದವೋ ಆ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ. ಕೆಲವರು ಹತ್ತು ದಿನ, ಮತ್ತೆ ಕೆಲವರು ಹದಿನೈದು ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಎಲ್ಲಾ ಮನೆಗಳಿಗೂ ಬೀಗ ಹಾಕಲಾಗಿತ್ತು. 12 ರಲ್ಲಿ ಆರು ಕಡೆ ವಿಫಲ ಯತ್ನ ನಡೆದಿದ್ದರೆ, ಐದು ಮನೆಗಳಲ್ಲಿ ಕಳ್ಳತನ ನಡೆದಿದೆ. ಎರಡು ಮನೆಯಲ್ಲಿ 50 ಗ್ರಾಂ, ಬೆಳ್ಳಿ ಕಳವು ಆಗಿದೆ. ಒಟ್ಟು 66 ಗ್ರಾಂ, 60 ಸಾವಿರ ರೂಪಾಯಿ ನಗದು, ಬೆಳ್ಳಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಈಗಾಗಲೇ ಸರ್ಕಲ್ ಇನ್ ಸ್ಪೆಕ್ಟರ್, ಪಿಎಸ್ ಐ ನೇತತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಗಳ ಜಾಡು ಹಿಡಿದು ಬಂಧಿಸುತ್ತೇವೆ. ಕೆಲವೊಂದು ಕಡೆ ಗಾಡ್ರೇಜ್ ಬೀರ್ ಬೀಗ ತೆರೆದಿದ್ದರೆ, ಮತ್ತೆ ಕೆಲವೆಡೆ ಬೀರ್ ಒಡೆದು ಕಳವು ಮಾಡಲಾಗಿದೆ. ಎಲ್ಲಾ ಕಳವು ಪ್ರಕರಣಗಳನ್ನು ನೋಡಿದರೆ ಸಾಮ್ಯತೆ ಇರುವುದು ಕಂಡು ಬಂದಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.