SUDDIKSHANA KANNADA NEWS/ DAVANAGERE/ DATE:10-02-2025
ದಾವಣಗೆರೆ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆಗೆ ಅಂತರ್ಜಲ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕೆಂದು ಜಿಲ್ಲಾಧಿಕಾರಿ ಹಾಗೂ ಅಂತರ್ಜಲ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಅಂತರ್ಜಲ ಪ್ರಾಧಿಕಾರ ಆಸ್ತಿತ್ವದಲ್ಲಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ಮೂಲ ಸೌಕಾರ್ಯ ಅಭಿವೃದ್ದಿ , ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಎನ್ಓಸಿ ಅನ್ನು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಪಡೆಯಬೇಕಾಗುತ್ತದೆ.
ನಿರಾಕ್ಷೇಪಣಾ ಪತ್ರ ಪಡೆಯಲು ವೆಬ್ಸೈಟ್ನ https://kgwa.in ಅಥವಾ https://antharjala.karnataka.gov.ln ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ವಿದ್ಯಾನಗರ, ದಾವಣಗೆರೆ ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.