SUDDIKSHANA KANNADA NEWS/ DAVANAGERE/ DATE :09-02-2025
ದಾವಣಗೆರೆ: ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ- 2025 ರಲ್ಲಿ ಯುವ ಉದ್ಯಮಿ ಶ್ರೀನಿವಾಸ್ ಶಿವಾಗಂಗಾ ನೇತೃತ್ವದಲ್ಲಿ ವೀರಶೈವ ಮಹಾಸಭಾ ದಾವಣಗೆರೆ ತಾಲ್ಲೂಕು ಘಟಕದ ಸದಸ್ಯರು ಭಾಗವಹಿಸಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಶಂಭು ಉರೇಕೊಂಡಿ, ಯುವ ಘಟಕದ ಅಧ್ಯಕ್ಷ ಅಜಿತ್ ಆಲೂರು, ಪದಾಧಿಕಾರಿಗಳಾದ ಯೋಗೀಶ್ ಅವರಗೊಳ್ಳ, ಚಂದ್ರಶೇಖರ ಕುಂದವಾಡಮಠ, ಕುಮಾರ್ ಶಾಮನೂರು,
ಅಭಿಜಿತ್, ಆದರ್ಶ್ ಎಸ್ ಎಂ, ಶಿವರತನ್, ನವೀನ್, ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.