SUDDIKSHANA KANNADA NEWS/ DAVANAGERE/ DATE:08-02-2025
ನವದೆಹಲಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ 27 ವರ್ಷಗಳ ವನವಾಸದ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಈ ಮೂಲಕ ಆಪ್ ಗೆ ಆಪ್ ಕೊಟ್ಟಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಶೂನ್ಯ ಸಂಪಾದಿಸಿ, ಭಾರೀ ಮುಖಭಂಗ ಅನುಭವಿಸಿದೆ.
ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಗೆಲುವಿನ ರಣಕೇಕೆ ಹಾಕಿ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿದಿತ್ತು. ದಶಕದ ಅಧಿಕಾರಕ್ಕೆ ಬ್ರೇಕ್ ಹಾಕಿರುವ ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಪಡೆ ತಿರುಗೇಟು ನೀಡಿದೆ. ಮತದಾರರು ಆಮ್ ಆದ್ಮಿ ತಿರಸ್ಕರಿಸಿ ಬಿಜೆಪಿಗೆ ಅಧಿಕಾರ ನೀಡಿದೆ.
ಆರಂಭದಿಂದಲೂ ಬಹುಮತದ ಸಂಖ್ಯೆ ಮುಟ್ಟಿದ್ದ ಬಿಜೆಪಿಯು ಅಂತಿಮವಾಗಿ ಅಧಿಕಾರ ಹಿಡಿದಿದೆ. 27 ವರ್ಷಗಳಿಂದಲೂ ಅಧಿಕಾರ ಇಲ್ಲದೇ ಕಂಗಾಲಾಗಿದ್ದ ಬಿಜೆಪಿಗೆ ಈ ಫಲಿತಾಂಶ ಬೂಸ್ಟ್ ನೀಡಿದೆ. ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸಿಡಿಯೋ ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ
ಆರೋಪದಿಂದಲೇ ಅಧಿಕಾರ ಕಳೆದುಕೊಂಡಿದೆ.
ಕಾಂಗ್ರೆಸ್ ಪಕ್ಷವು ಒಂದು ಸ್ಥಾನದಲ್ಲಿಯೂ ಗೆಲ್ಲದೇ ನಿರಾಸೆ ಅನುಭವಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಈ ಫಲಿತಾಂಶ ಮುಖಭಂಗಕ್ಕೆ ಒಳಗಾಗುವಂತೆ ಮಾಡಿದೆ.