SUDDIKSHANA KANNADA NEWS/ DAVANAGERE/ DATE:04-02-2025
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಪರ್ವಕಾಲದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಶ್ರೀ ಶ್ರೀ ರವಿಶಂಕರ್ ಗುರೂಜೀಯವರೊಂದಿಗೆ ದಾವಣಗೆರೆ ಜಿಲ್ಲೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಭೇಟಿ ಮಾಡಿದರು.
ಸ್ವತಃ ಶ್ರೀ ಶ್ರೀ ರವಿಶಂಕರ್ ಗುರೂಜೀಯವರು ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥರ ಹತ್ತಿರ ಕರೆದುಕೊಂಡು ಹೋಗಿ ವಚನಾನಂದ ಸ್ವಾಮೀಜಿ ಅವರ ಯೋಗ ಸಾಧನೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಪರಂಪರೆಯನ್ನು ಪರಿಚಯಿಸಿದರು.
ಮೊದಲನೆಯದಾಗಿ ಶ್ರೀ ಯೋಗಿ ಆದಿತ್ಯನಾಥರು ಪ್ರಯಾಗರಾಜ ಮಹಾಕುಂಭಮೇಳಕ್ಕೆ ಕರ್ನಾಟಕದಿಂದ ಆಗಮಿಸಿದಕ್ಕೆ ಹೃದಯತುಂಬಿ ಸ್ವಾಗತಿಸಿದರು. ಎರಡನೆಯದಾಗಿ ಯೋಗ ಸಾಧನೆಗೆ ಮೂಲಕ “ಯೋಗಯುಕ್ತ-ರೋಗಮುಕ್ತ” ಸ್ವಸ್ಥ
ಸಮಾಜ ನಿರ್ಮಾಣ ಸೇವಾಕಾರ್ಯವನ್ನು ಶ್ಲಾಘಿಸಿದರು.
ಈ ಸಂಧರ್ಭದಲ್ಲಿ ಪೂಜ್ಯ ಶ್ರೀ ವಿಜಯಾನಂದ ಸರಸ್ವತಿಯವರು ಹಾಗೂ ಜರ್ಮನ್ ದೇಶದ ಯೂರೋಪಿಯನ್ ಪಾರ್ಲಿಮೆಂಟಿನ ಮಾಜಿ ಸಂಸದರಾದ ಜೋಶೆಪ್ ಲೆನಿನ್ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ವಚನಾನಂದ ಶ್ರೀಗಳು ಇಂಥ ಐತಿಹಾಸಿಕ ಕುಂಭಮೇಳದಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಪುಣ್ಯ ಸ್ನಾನ ಮಾಡಿ ಪುನೀತರಾದೆವು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ಯೋಗ ಸಾಧನೆ, ಪಂಚಮಸಾಲಿ ಪೀಠದ ಪರಂಪರೆ ಬಗ್ಗೆ ಮೆಚ್ಚುಗೆ ಮಾತನಾಡಿದ್ದು ಖುಷಿ ಹೆಚ್ಚಾಗುವಂತೆ ಮಾಡಿತು ಎಂದು ಹೇಳಿದರು.