Home ಕ್ರೈಂ ನ್ಯೂಸ್ ಹೃದಯವಿದ್ರಾವಕ: ಆಸ್ಪತ್ರೆಯ ಮಕ್ಕಳ ಆರೈಕೆ ಘಟಕದಲ್ಲಿ ಬೆಂಕಿ ಅವಘಡಕ್ಕೆ ಬಲಿಯಾಯ್ತು ನವಜಾತ ಶಿಶು: 33 ಎಳೆ ಕಂದಮ್ಮಗಳು ಪಾರಾಗಿದ್ದೇಗೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೃದಯವಿದ್ರಾವಕ: ಆಸ್ಪತ್ರೆಯ ಮಕ್ಕಳ ಆರೈಕೆ ಘಟಕದಲ್ಲಿ ಬೆಂಕಿ ಅವಘಡಕ್ಕೆ ಬಲಿಯಾಯ್ತು ನವಜಾತ ಶಿಶು: 33 ಎಳೆ ಕಂದಮ್ಮಗಳು ಪಾರಾಗಿದ್ದೇಗೆ?

Share
ಆಸ್ಪತ್ರೆ
Share

ಚಿಂಡ್ವಾರಾ (ಮಧ್ಯಪ್ರದೇಶ): ಇಲ್ಲಿನ ಜಿಲ್ಲಾ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ (SNCU) ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಜಬಲ್‌ಪುರ್‌ನಲ್ಲಿ ಸಾವನ್ನಪ್ಪಿದೆ. ಶನಿವಾರ ಮುಂಜಾನೆ ವಾರ್ಮರ್ ಯಂತ್ರದ ಫಿಲಾಮೆಂಟ್‌ನಲ್ಲಿ ಉಂಟಾದ ಸ್ಪಾರ್ಕಿಂಗ್‌ನಿಂದಾಗಿ ಈ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ಸಮಯದಲ್ಲಿ ಘಟಕದಲ್ಲಿ ಒಟ್ಟು 33 ಶಿಶುಗಳಿದ್ದವು. ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಬೆಂಕಿ ನಂದಿಸುವ ಯಂತ್ರಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಿ, ಉಳಿದ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದರು.

ಗಾಯಗೊಂಡ ಮೂರೂ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಬಲ್‌ಪುರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಗಂಭೀರ ಸ್ಥಿತಿಯಲ್ಲಿದ್ದ ಒಂದು ಮಗು ಮೃತಪಟ್ಟಿದೆ. ಆಡಳಿತ ಮಂಡಳಿಯು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ

Share

Leave a comment

Leave a Reply

Your email address will not be published. Required fields are marked *

Related Articles