Home ದಾವಣಗೆರೆ ಬೆಳೆಗೆ ನೀರೊದಗಿಸುವಂತೆ ಪಟ್ಟು: ಭದ್ರಾ ಡ್ಯಾಂ ನೀರು ಹರಿಸದಿದ್ದರೆ ಆಗಸ್ಟ್ 24ರಂದು ದಾವಣಗೆರೆ ಬಂದ್‌ಗೆ ಕರೆ!
ದಾವಣಗೆರೆಬೆಂಗಳೂರು

ಬೆಳೆಗೆ ನೀರೊದಗಿಸುವಂತೆ ಪಟ್ಟು: ಭದ್ರಾ ಡ್ಯಾಂ ನೀರು ಹರಿಸದಿದ್ದರೆ ಆಗಸ್ಟ್ 24ರಂದು ದಾವಣಗೆರೆ ಬಂದ್‌ಗೆ ಕರೆ!

Share
ದಾವಣಗೆರೆ
Share

ದಾವಣಗೆರೆ: ಭದ್ರಾ ನಾಲೆಗೆ ತಕ್ಷಣವೇ ನೀರು ಬಿಡುಗಡೆ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಆಗಸ್ಟ್ 24ರಂದು ಬೆಳಿಗ್ಗೆ 8 ಗಂಟೆಯಿಂದ ಸಂಪೂರ್ಣ ದಾವಣಗೆರೆ ಬಂದ್‌ಗೆ ಭಾರತೀಯ ರೈತ ಒಕ್ಕೂಟ ದಾವಣಗೆರೆ ಜಿಲ್ಲಾ ಘಟಕ ಕರೆ ನೀಡಿದೆ.

ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ತಕ್ಷಣವೇ ನೀರು ಪೂರೈಸಬೇಕೆಂಬ ಪ್ರಮುಖ ಬೇಡಿಕೆಗೆ ಆಗ್ರಹಿಸಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಿದ್ದು, ನಗರದ ಸಾರ್ವಜನಿಕರು, ವರ್ತಕರು, ದಲ್ಲಾಳರು, ಜವಳಿ ಅಂಗಡಿ ಮಾಲೀಕರು, ಚಿನ್ನಾಭರಣ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಮಿಲ್ ಮಾಲೀಕರು, ಕೂಲಿ ಕಾರ್ಮಿಕರು, ಕಿರಾಣಿ ವರ್ತಕರು, ಆಟೋ ಮಾಲೀಕರು ಮತ್ತು ಚಾಲಕರು, ತರಕಾರಿ ಹಾಗೂ ಈರುಳ್ಳಿ ವರ್ತಕರು, ಚಿತ್ರಮಂದಿರಗಳ ಮಾಲೀಕರು ಸೇರಿದಂತೆ ಎಲ್ಲಾ ವರ್ಗದ ಜನರು ಬಂದ್‌ಗೆ ಸಕ್ರಿಯ ಸಹಕಾರ ನೀಡಬೇಕಾಗಿ ವಿನಂತಿಸಲಾಗಿದೆ.

ರೈತರ ನ್ಯಾಯಯುತ ಹೋರಾಟಕ್ಕೆ ಪ್ರತಿಯೊಬ್ಬ ನಾಗರಿಕರೂ ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಬೇಕೆಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್. ಆರ್. ಲಿಂಗರಾಜ್, ಲಿಂಗರಾಜ್ ಹಾಗೂ ಪದಾಧಿಕಾರಿಗಳಾದ ಚಂದ್ರಶೇಖರ್ ಪೂಜಾರಿ, ನಾಗೇಶ್ ರಾವ್, ಕುಂದವಾಡ ಹನುಮಂತಪ್ಪ, ಎ. ಎಂ. ಮಂಜುನಾಥ್, ಪುನೀತ್, ಮಹೇಶ್, ವಿಜಯ್ ಕುಮಾರ್, ಷಣ್ಮುಖಯ್ಯ, ಗುರುನಾಥ್ ಮತ್ತು ಗಣೇಶಪ್ಪ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles