Home ಕ್ರೈಂ ನ್ಯೂಸ್ RSS ನಿರ್ಬಂಧಿಸಬೇೆಕೆಂದ ಅಮೆರಿಕ ಸಂಸ್ಥೆಗೆ ಭಾರತ ತೀವ್ರ ತರಾಟೆ, “ಪಕ್ಷಪಾತದ ಸಂಘಟನೆ ಅದು”: ರಣಧೀರ್ ಜೈಸ್ವಾಲ್ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

RSS ನಿರ್ಬಂಧಿಸಬೇೆಕೆಂದ ಅಮೆರಿಕ ಸಂಸ್ಥೆಗೆ ಭಾರತ ತೀವ್ರ ತರಾಟೆ, “ಪಕ್ಷಪಾತದ ಸಂಘಟನೆ ಅದು”: ರಣಧೀರ್ ಜೈಸ್ವಾಲ್ ಆಕ್ರೋಶ!

Share
ಅಮೆರಿಕ
Share

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಭೇಟಿಗೂ ಮುನ್ನ, ಆರ್‌ಎಸ್‌ಎಸ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕದ ಪ್ರಮುಖ ಸಂಸ್ಥೆಗೆ ಶಿಫಾರಸು ಮಾಡಿದ ‘ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ’ವನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

USCIRF ಅನ್ನು “ಪಕ್ಷಪಾತದ ಸಂಘಟನೆ” ಎಂದು ಬಣ್ಣಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಅದಕ್ಕೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಯುಎಸ್‌ಸಿಐಆರ್‌ಎಫ್ ತನ್ನದೇ ಆದ ಕಾರ್ಯಸೂಚಿಯನ್ನು ಹೊಂದಿದ್ದು, ಭಾರತದ ವಿರುದ್ಧ ನಿರಂತರವಾಗಿ ಪ್ರಚೋದನಕಾರಿ ಹಾಗೂ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಭಾರತದ ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ ವಾಸ್ತವವನ್ನು ಗ್ರಹಿಸುವ ಸಾಮರ್ಥ್ಯ ಈ ಸಂಸ್ಥೆಗೆ ಇಲ್ಲ,” ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆಗಸ್ಟ್ 29 ರಂದು ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ USCIRF ಅಧ್ಯಕ್ಷ ಆಸಿಫ್ ಮಹಮೂದ್ ಹಾಗೂ ಸದಸ್ಯರು ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿ, ಆರ್‌ಎಸ್‌ಎಸ್ ನಾಯಕರಿಗೆ ರಾಜತಾಂತ್ರಿಕ ಮರ್ಯಾದೆಗಳನ್ನು ನೀಡಬಾರದು ಮತ್ತು ಆ ಸಂಸ್ಥೆಯ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಭಾರತ ಸರ್ಕಾರದ ಜೊತೆಗೆ ಅಮೆರಿಕದಲ್ಲಿರುವ ಪ್ರಮುಖ ಹಿಂದೂ ಹಕ್ಕುಗಳ ಸಂಘಟನೆಯಾದ ‘ಹಿಂದೂಪ್ಯಾಕ್ಟ್’ (HinduPACT) ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles