Home ಕ್ರೈಂ ನ್ಯೂಸ್ “ನೀವು ಸಿಂಹಗಳೋ ಅಥವಾ ಜಿರಳೆಗಳೋ?”: ವಿದ್ಯಾರ್ಥಿಗಳಿಗೆ ಕೇರಳ ವಿವಿ ಕುಲಪತಿ ವಿವಾದಾತ್ಮಕ ಪ್ರಶ್ನೆ, ನೀರವ ಮೌನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ನೀವು ಸಿಂಹಗಳೋ ಅಥವಾ ಜಿರಳೆಗಳೋ?”: ವಿದ್ಯಾರ್ಥಿಗಳಿಗೆ ಕೇರಳ ವಿವಿ ಕುಲಪತಿ ವಿವಾದಾತ್ಮಕ ಪ್ರಶ್ನೆ, ನೀರವ ಮೌನ!

Share
ವಿದ್ಯಾರ್ಥಿ
Share

ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿ (VC) ಡಾ. ಮೋಹನನ್ ಕುನ್ನುಮ್ಮಲ್ ಅವರು ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇಳಿದ ವಿವಾದಾತ್ಮಕ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಿರುವನಂತಪುರಂನಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ‘ವಿಜಯತಾರಕಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೆಲವರು ನಿಮ್ಮನ್ನು ಜಿರಳೆಗಳು ಎಂದು ಕರೆಯುತ್ತಾರೆ. ಆದರೆ ನೀವು ಜಿರಳೆಗಳಲ್ಲ, ಈ ದೇಶದ ಶಕ್ತಿಯಾಗಿರುವ ಸಿಂಹಗಳು. ನೀವು ಸಿಂಹಗಳೋ ಅಥವಾ ಜಿರಳೆಗಳೋ?” ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಕುಲಪತಿಗಳು ಈ ಪ್ರಶ್ನೆಯನ್ನು ಪದೇ ಪದೇ ಕೇಳಿದರೂ ಮತ್ತು “ನಾವು ಜಿರಳೆಗಳಲ್ಲ” ಎಂದು ಗಟ್ಟಿಯಾಗಿ ಹೇಳುವಂತೆ ಕೋರಿದರೂ, ಸಭೆಯಲ್ಲಿದ್ದ ನೂರಾರು ವಿದ್ಯಾರ್ಥಿಗಳು ಯಾವುದೇ ಉತ್ತರ ನೀಡದೆ ಮೌನವಾಗಿಯೇ ಉಳಿದರು. ಕೇವಲ ಒಬ್ಬಿಬ್ಬರು ವಿದ್ಯಾರ್ಥಿಗಳು ಮಾತ್ರ ಇದಕ್ಕೆ ಸ್ಪಂದಿಸಿದರು. ವಿದ್ಯಾರ್ಥಿಗಳ ಮೌನದಿಂದ ಅಸಮಾಧಾನಗೊಂಡ VC, “ನಿಮಗೆ ಗೊಂದಲವಿದೆಯೇ? ಮಧ್ಯಾಹ್ನದ ಊಟ ಅಥವಾ ಟೀ ಸಿಗಲಿಲ್ಲವೇ?” ಎಂದು ಕೇಳಿ ಭಾಷಣ ಮುಂದುವರಿಸಿದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹಾಗೂ ಬಿಜೆಪಿ ನಾಯಕ ವಿ. ಮುರಳೀಧರನ್ ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ RSS ಕಾರ್ಯಕ್ರಮವೊಂದರಲ್ಲಿ “ವಂದೇ ಮಾತರಂ ವಿರೋಧಿಸುವವರಿಗೆ ತಮ್ಮ ತಾಯಿ ಯಾರೆಂದು ತಿಳಿದಿಲ್ಲ” ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಮೋಹನನ್ ಕುನ್ನುಮ್ಮಲ್ ಅವರ ಈ ಹೊಸ ಹೇಳಿಕೆ ಮತ್ತು ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.

Share

Leave a comment

Leave a Reply

Your email address will not be published. Required fields are marked *