Home ದಾವಣಗೆರೆ ದಾವಣಗೆರೆಯಲ್ಲಿ ಬಿಡಾಡಿ ಹಂದಿಗಳ ಹಾವಳಿಗೆ ಪಾಲಿಕೆ ಬ್ರೇಕ್: ಹಂದಿ ಮಾಲೀಕರಿಗೆ ಆಯುಕ್ತರ ಕಠಿಣ ಎಚ್ಚರಿಕೆ!
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಬಿಡಾಡಿ ಹಂದಿಗಳ ಹಾವಳಿಗೆ ಪಾಲಿಕೆ ಬ್ರೇಕ್: ಹಂದಿ ಮಾಲೀಕರಿಗೆ ಆಯುಕ್ತರ ಕಠಿಣ ಎಚ್ಚರಿಕೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಬಿಡಾಡಿ ಹಂದಿಗಳನ್ನು ನಿಯಂತ್ರಿಸುವುದು ಅವಶ್ಯವಿರುತ್ತದೆ.

ಬಿಡಾಡಿ ಹಂದಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗುತ್ತಿದ್ದು, ಹಂದಿಗಳಿಂದ ನಿಫಾ ವೈರಸ್, ಎಚ್1. ಎನ್1 ಹಾಗೂ ಇನ್ನಿತರೆ ಸಾಂಕ್ರಮಿಕ ಖಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ, ನಗರದ ದಾವಣಗೆರೆ ಮಹಾನಗರ ಪಾಲಿಕೆಯ ಅನುಮತಿಯಿಲ್ಲದೇ ಹಂದಿಗಳ ಸಾಕಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಉಪದ್ರವಕಾರಿಯಾಗುವಂತೆ ಬಿಡಾಡಿಯಾಗಿ ಅಲೆಯಲು ಬಿಡುವುದು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ಉಲ್ಲಂಘನೆಯಾಗಿರುತ್ತದೆ.

ಆಯುಕ್ತರ ಸೂಚನೆಗಳು ಮತ್ತು ಎಚ್ಚರಿಕೆ:

  • ಸ್ವಂತ ಸ್ಥಳದಲ್ಲಿ ಸಾಕಣೆ: ಹಂದಿ ಮಾಲೀಕರು ತಕ್ಷಣವೇ ತಮ್ಮ ಹಂದಿಗಳನ್ನು ಸೂಕ್ತ ಬಂದೋಬಸ್ತ್‌ನೊಂದಿಗೆ ಕಟ್ಟಿ ಸಾಕಬೇಕು.

  • ಸ್ಥಳಾಂತರಕ್ಕೆ ಅವಕಾಶ: ಪಾಲಿಕೆ ನಿರ್ಮಿಸಿರುವ ನಿಗದಿತ ಸ್ಥಳಕ್ಕೆ ಹಂದಿಗಳನ್ನು ಸ್ಥಳಾಂತರಿಸಲು ಸಿದ್ಧರಿದ್ದಲ್ಲಿ ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

  • ನಾಶಪಡಿಸುವ/ಹಿಡಿಯುವ ಕಾರ್ಯಾಚರಣೆ: ನಿಯಮ ಮಾರಿ ಸಾರ್ವಜನಿಕರಿಗೆ ಉಪದ್ರವ ನೀಡುವ ಬಿಡಾಡಿ ಹಂದಿಗಳನ್ನು ‘ಮಾಲೀಕರಿಲ್ಲದ ಹಂದಿಗಳು’ ಎಂದು ಪರಿಗಣಿಸಿ, ಅಧಿನಿಯಮದಂತೆ ಹಿಡಿದು ಸಾಗಿಸಲಾಗುವುದು ಅಥವಾ ನಾಶಪಡಿಸಲಾಗುವುದು.

  • ನಷ್ಟಕ್ಕೆ ಪಾಲಿಕೆ ಹೊಣೆಯಲ್ಲ: ಈ ಕಾರ್ಯಾಚರಣೆಯ ವೇಳೆಯಲ್ಲಿ ಮಾಲೀಕರಿಗೆ ಉಂಟಾಗುವ ಯಾವುದೇ ರೀತಿಯ ಆರ್ಥಿಕ ಅಥವಾ ಭೌತಿಕ ನಷ್ಟಕ್ಕೆ ಮಹಾನಗರ ಪಾಲಿಕೆ ಜವಾಬ್ದಾರಿಯಾಗುವುದಿಲ್ಲ ಎಂದು ಆಯುಕ್ತ ಮಹಾಂತೇಶ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ತಮ್ಮ ಹಂದಿಗಳನ್ನು ಬೀಡಾಡಿಯಾಗಿ ಅಲೆಯುವಂತೆ ಬಿಟ್ಟಿರುವಂತಹ ಹಂದಿ ಮಾಲೀಕರು ತಕ್ಷಣವೇ ತಮ್ಮ ಹಂದಿಗಳನ್ನು ಸೂಕ್ತ ಸೌಲಭ್ಯದೊಂದಿಗೆ ಕಟ್ಟಿ ಸಾಕುವಂತೆ ಇಲ್ಲವೇ, ಹಂದಿಗಳ ಸ್ಥಳಾಂತರಕ್ಕಾಗಿ ಪಾಲಿಕೆಯು ನಿರ್ಮಿಸಿರುವ ಸ್ಥಳದಲ್ಲಿ ಸಾಕಣೆ ಮಾಡಲು ಸಿದ್ಧವಿದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು.

ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಸಾರ್ವಜನಿಕರಿಗೆ ಉಪದ್ರವವಾಗುವಂತೆ ಅಲೆಯುತ್ತಿರುವ ಬಿಡಾಡಿ ಹಂದಿಗಳನ್ನು ಯಾವುದೇ ಮಾಲೀಕರಿಲ್ಲದ ಬೀಡಾಡಿ ಹಂದಿಗಳೆಂದು ಪರಿಗಣಿಸಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ನಾಶಪಡಿಸಲು ಅಥವಾ ಹಿಡಿದು ಸಾಗಿಸುವುದರೊಂದಿಗೆ, ಹಂದಿಗಳನ್ನು ಬಿಡಾಡಿಯಾಗಿ ಅಲೆಯಲು ಬಿಡುವವರ ಮೇಲೆ ನಿಯಮಾನುಸಾರ ಕ್ರಮವಹಿಸಲಾಗುವುದು. ಹಾಗೂ ಇದರಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಮಹಾನಗರ ಪಾಲಿಕೆ ಜವಾಬ್ದಾರಿಯಾಗುವುದಿಲ್ಲವೆಂದು ಪಾಲಿಕೆ ಆಯುಕ್ತರಾದ ಮಹಾಂತೇಶ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles