Home ಉದ್ಯೋಗ ವಾರ್ತೆ ಬಿಇಎಂಎಲ್‌ನಿಂದ 1,346 ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಚಾಲನೆ: ಪರೀಕ್ಷೆಯಿಲ್ಲದೆ ಮೆರಿಟ್ ಆಧಾರಿತ ಆಯ್ಕೆ, ಅರ್ಜಿ ಸಲ್ಲಿಸುವುದು ಹೇಗೆ?
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಬಿಇಎಂಎಲ್‌ನಿಂದ 1,346 ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಚಾಲನೆ: ಪರೀಕ್ಷೆಯಿಲ್ಲದೆ ಮೆರಿಟ್ ಆಧಾರಿತ ಆಯ್ಕೆ, ಅರ್ಜಿ ಸಲ್ಲಿಸುವುದು ಹೇಗೆ?

Share
BEML
Share

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್’ (BEML) 2026-27ನೇ ಸಾಲಿನ 1,346 ಅಪ್ರೆಂಟಿಸ್ ತರಬೇತಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Advt No: L&D/01/2026) ಬಿಡುಗಡೆ ಮಾಡಿದೆ. ಬಿ.ಇ/ಬಿ.ಟೆಕ್, ಡಿಪ್ಲೊಮಾ, ಸಾಮಾನ್ಯ ಪದವಿ (BBA/B.Com/BCA/BA/B.Sc) ಹಾಗೂ ಐಟಿಐ (ITI) ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಈ ಸುವರ್ಣ ಅವಕಾಶ ಸಿಕ್ಕಿದೆ.

ಉದ್ಯೋಗ ವಿವರ ಮತ್ತು ಸ್ಟೈಪೆಂಡ್:

ಬೆಂಗಳೂರು ಕಾಂಪ್ಲೆಕ್ಸ್: 400 ಹುದ್ದೆಗಳು

ಕೆಜಿಎಫ್ (KGF) ಕಾಂಪ್ಲೆಕ್ಸ್: 608 ಹುದ್ದೆಗಳು

ಮೈಸೂರು ಕಾಂಪ್ಲೆಕ್ಸ್: 227 ಹುದ್ದೆಗಳು

ಪಾಲಕ್ಕಾಡ್ ಕಾಂಪ್ಲೆಕ್ಸ್: 111 ಹುದ್ದೆಗಳು

ತರಬೇತಿ ಅವಧಿ 1 ವರ್ಷವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಹತೆಗೆ ಅನುಗುಣವಾಗಿ ಮಾಸಿಕ ₹9,600 ರಿಂದ ₹12,300 ರವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.

ಅರ್ಹತೆ ಮತ್ತು ಆಯ್ಕೆ ವಿಧಾನ: ಕಳೆದ 3 ವರ್ಷಗಳಲ್ಲಿ (2023 ರ ನಂತರ) ನಿಯಮಿತ ಕೋರ್ಸ್ ಮೂಲಕ ತೇರ್ಗಡೆಯಾದ 17 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ (Merit List) ಆಧಾರದ ಮೇಲೆ ನೇರವಾಗಿ ದಾಖಲಾತಿ ಪರಿಶೀಲನೆಗೆ ಕರೆದು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು BEML ನ ಅಧಿಕೃತ ಜಾಲತಾಣ recruitment.bemlindia.in ಮೂಲಕ ಸೆಪ್ಟೆಂಬರ್ 08, 2026 (ರಾತ್ರಿ 11:00) ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles