ಹೊಸದೆಹಲಿ / ಚೆನ್ನೈ: ಪ್ರಸಿದ್ಧ ನಟಿ ಅನುಪಮಾ ಪರಮೇಶ್ವರನ್ ತಮ್ಮ ಹಳೆಯ ಪ್ರೇಮ ಜೀವನದ ಕಹಿ ಘಟನೆಗಳ ಕುರಿತು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಧ್ಯಾನ್ ವರ್ಮಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ತಮ್ಮ ಮಾಜಿ ಪ್ರೇಮಿ ತನಗೆ ಅತ್ಯಂತ ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಸ್ತ್ರೀತ್ವ ಹಾಗೂ ಋತುಚಕ್ರದ (Periods) ವಿಷಯದಲ್ಲಿ ಕೀಳರಿಮೆ ಉಂಟಾಗುವಂತೆ ಮಾಡಿದ್ದನೆಂದು ಕಣ್ಣೀರಿಟ್ಟಿದ್ದಾರೆ.
“ನಾನು ಒಬ್ಬ ನಟಿ, ಸ್ವತಂತ್ರ ಮಹಿಳೆ ಹಾಗೂ ಆತ್ಮವಿಶ್ವಾಸವುಳ್ಳವಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುವಂತೆ ಮಾಡಲಾಗಿತ್ತು. ಋತುಚಕ್ರದ ಸಮಯದಲ್ಲಿ ಯಾವುದೇ ಸಣ್ಣ ಜಗಳ ಅಥವಾ ಭಿನ್ನಾಭಿಪ್ರಾಯ ಬಂದರೂ ಅದನ್ನು ನನ್ನ ‘PMSing’ ಎಂದು ಎತ್ತಿಡುತ್ತಿದ್ದ. ಇದರಿಂದ ನಾನು ಮಹಿಳೆಯಾಗಿದ್ದಕ್ಕೇ ಬೇಸರ ಪಡುವ ಸ್ಥಿತಿ ನಿರ್ಮಾಣವಾಗಿತ್ತು” ಎಂದು ಅನುಪಮಾ ಹೇಳಿದ್ದಾರೆ.
ಒಮ್ಮೆ 11 ಮಕ್ಕಳನ್ನು ಪಡೆಯಬೇಕೆಂಬ ಆಸೆ ಹೊಂದಿದ್ದ ಅನುಪಮಾ, ಈ ಎರಡು ವರ್ಷಗಳ ವಿಷಕಾರಿ ಸಂಬಂಧದ ನಂತರ ತನಗೆ ಮದುವೆ ಮತ್ತು ಮಕ್ಕಳ ಮೇಲಿನ ನಂಬಿಕೆಯೇ ಹೊರಟುಹೋಗಿದೆ ಎಂದಿದ್ದಾರೆ.
ಅಲ್ಲದೆ, ಅವರ ಬಟ್ಟೆ ಧರಿಸುವ ಶೈಲಿ, ಸಿನಿಮಾಗಳ ಪ್ರಚಾರ (Dragon ಚಿತ್ರದ ಪ್ರಚಾರಕ್ಕೆ ಹೋಗದಿರುವುದು) ಹಾಗೂ ವೃತ್ತಿಜೀವನದ ನಿರ್ಧಾರಗಳ ಮೇಲೂ ಮಾಜಿ ಪ್ರೇಮಿ ತೀವ್ರ ನಿಯಂತ್ರಣ ಸಾಧಿಸುತ್ತಿದ್ದನೆಂದು ಆರೋಪಿಸಿದ್ದಾರೆ.





Leave a comment