Home ಕ್ರೈಂ ನ್ಯೂಸ್ ಐಫೋನ್, ಬೈಕ್‌ಗಾಗಿ ಸಂಬಂಧಿಯನ್ನೇ ಕೊಲ್ಲಿಸಿದ 13 ವರ್ಷದ ಬಾಲಕಿ: ಕೊಂದ ಬಳಿಕ ವಿಡಿಯೋ ಕಾಲ್ ನಲ್ಲಿ ತೋರಿಸಿದ ಹತ್ಯೆಕೋರರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಐಫೋನ್, ಬೈಕ್‌ಗಾಗಿ ಸಂಬಂಧಿಯನ್ನೇ ಕೊಲ್ಲಿಸಿದ 13 ವರ್ಷದ ಬಾಲಕಿ: ಕೊಂದ ಬಳಿಕ ವಿಡಿಯೋ ಕಾಲ್ ನಲ್ಲಿ ತೋರಿಸಿದ ಹತ್ಯೆಕೋರರು!

Share
ಐಫೋನ್
Share

ಆಲಪ್ಪುಳ (ಕೇರಳ): ಖಾಸಗಿ ಆಸೆಗಳನ್ನು ಈಡೇರಿಸಿಕೊಳ್ಳಲು ಅಪ್ರಾಪ್ತ ವಯಸ್ಕರು ಹಾದಿ ತಪ್ಪಿ ಭೀಕರ ಅಪರಾಧ ಎಸಗಿರುವ ಆಘಾತಕಾರಿ ಘಟನೆಯೊಂದು ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಐಫೋನ್ ಹಾಗೂ ಬೈಕ್ ಖರೀದಿಸಲು ಹಣ ಹಾಗೂ ಚಿನ್ನಾಭರಣಕ್ಕಾಗಿ 13 ವರ್ಷದ ಬಾಲಕಿಯೊಬ್ಬಳು ತನ್ನ 67 ವರ್ಷದ ಹಿರಿಯ ಸಂಬಂಧಿ ಸಿವನ್‌ಕುಟ್ಟಿ ಚೆಟ್ಟಿಯಾರ್ ಎಂಬವರ ಕೊಲೆಗೆ ಸಂಚು ರೂಪಿಸಿದ್ದಾಳೆ.

ಘಟನೆಯ ವಿವರ:

8ನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಬಾಲಕಿ, ತನ್ನ 17 ವರ್ಷದ ಪ್ರೇಮಿ ಹಾಗೂ ಆತನ ಇಬ್ಬರು ಸ್ನೇಹಿತರೊಂದಿಗೆ (16 ಮತ್ತು 17 ವರ್ಷ) ಸೇರಿ ಈ ಪ್ಲಾನ್ ಮಾಡಿದ್ದಳು.

ಸಿವನ್‌ಕುಟ್ಟಿ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಮಯವನ್ನು ಸಾಧಿಸಿ, ಬಾಲಕಿಯ ನಿರ್ದೇಶನದಂತೆ ಹಿಂಬಾಗಿಲಿನ ವೆಂಟಿಲೇಟರ್ ಮೂಲಕ ಮನೆ ಪ್ರವೇಶಿಸಿದ ಮೂವರು ಅಪ್ರಾಪ್ತ ಯುವಕರು, ವೃದ್ಧನ ಕೈಕಾಲುಗಳನ್ನು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಕೊಲೆ ಪ್ರಸಾರ:

ಕೊಲೆ ನಡೆಸಿದ ತಕ್ಷಣವೇ ಪ್ರೇಮಿಯು ಬಾಲಕಿಗೆ ವಿಡಿಯೋ ಕಾಲ್ ಮಾಡಿ ಮೃತದೇಹವನ್ನು ತೋರಿಸಿದ್ದಾನೆ. ನಂತರ ಬಾಲಕಿಯು ವಿಡಿಯೋ ಕಾಲ್ ಮೂಲಕವೇ ಮನೆಯಲ್ಲಿ ಎಲ್ಲೆಲ್ಲಿ ಚಿನ್ನದ ಆಭರಣಗಳನ್ನು ಇಡಲಾಗಿದೆ ಎಂಬುದನ್ನು ತೋರಿಸಿ ಕಳವಿಗೆ ನೆರವಾಗಿದ್ದಾಳೆ. ತನಿಖಾ ಶ್ವಾನಗಳು ಸುಳಿವು ಹಿಡಿಯದಂತೆ ಮಾಡಲು ಸಿನಿಮಾಗಳಿಂದ ಪ್ರೇರಣೆ ಪಡೆದು ಕೃತ್ಯ ನಡೆದ ಸ್ಥಳದಲ್ಲಿ ಮೆಣಸಿನಕಾಯಿ ಪುಡಿಯನ್ನು ಎರಚಿದ್ದರು.

ಪೊಲೀಸ್ ತನಿಖೆ ಮತ್ತು ಬಂಧನ:

ಪೊಲೀಸರು ಸುಳಿವು ಆಧರಿಸಿ ವಿಚಾರಣೆ ನಡೆಸಿದಾಗ ಬಾಲಕಿಯ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂತು. ತೀವ್ರ ವಿಚಾರಣೆಯ ನಂತರ ಇಡೀ ಕರಾಳ ಕೃತ್ಯ ಬಯಲಾಗಿದೆ. ಸುಮಾರು ₹5.61 ಲಕ್ಷ ಮೌಲ್ಯದ 4.5 ಪವನ್ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಲ್ಲಾ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ 16 ಮತ್ತು 17 ವರ್ಷದ ಯುವಕರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles