ದಾವಣಗೆರೆ: ಚನ್ನಗಿರಿ ಮತ್ತು ದಾವಣಗೆರೆ ಅಡಿಕೆ ಮಾರುಕಟ್ಟೆಯ ಇಂದಿನ ದರ ಇಲ್ಲಿದೆ.
ಗುಟ್ಕಾ ನಿಷೇಧದ ಭೀತಿ ನಡುವೆ ಅಡಿಕೆ ಧಾರಣೆ ಏರಿಳಿತ ಮುಂದುವರಿದಿದ್ದು, ಗರಿಷ್ಠ ಬೆಲೆ 51,879 ರೂಪಾಯಿ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುಂಠಿತವಾಗಿದೆ. 51 ಸಾವಿರ ರೂಪಾಯಿಗೆ ಕುಸಿಯಲು ಗುಟ್ಕಾ ಬ್ಯಾನ್ ಗುಮ್ಮವೇ ಕಾರಣ ಎಂದು ರೈತರು ಹೇಳುತ್ತಿದ್ದಾರೆ.
ರೈತ ಬಾಂಧವರ ಮಾಹಿತಿಗಾಗಿ ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಚನ್ನಗಿರಿ ಹಾಗೂ ದಾವಣಗೆರೆ ಮಾರುಕಟ್ಟೆಯ ಅಡಿಕೆ ಮತ್ತು ಕಾಳುಮೆಣಸಿನ ಇತ್ತೀಚಿನ ಧಾರಣೆ ವಿವರ ಇಲ್ಲಿದೆ.
ಚನ್ನಗಿರಿ APMC ಮಾರುಕಟ್ಟೆ ಧಾರಣೆ (17/08/2026):
ರಾಶಿ ಅಡಿಕೆ:
ಕನಿಷ್ಠ ಬೆಲೆ: ₹38,099
ಗರಿಷ್ಠ ಬೆಲೆ: ₹51,879
ಸರಾಸರಿ ಬೆಲೆ: ₹47,870
2nd ಬೆಟ್ಟೆ ಅಡಿಕೆ: ₹36,779
ಕಾಳುಮೆಣಸು (Black Pepper): ₹66,599
ದಾವಣಗೆರೆ ಮಾರುಕಟ್ಟೆ ಧಾರಣೆ:
ಹಸಿ ಅಡಿಕೆ: ₹6,600 / ಪ್ರತಿ ಕ್ವಿಂಟಲ್ ಗೆ
ಅಡಿಕೆ ಧಾರಣೆಯು ಮತ್ತಷ್ಟು ಕುಸಿತ ಕಂಡರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಅಂದುಕೊಂಡಂತೆ ಮಳೆಯಾಗದ ಕಾರಣ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ರೈತರು ನೀರನ್ನು ತೋಟಕ್ಕೆ ಒದಗಿಸಲು ಕಷ್ಟಪಡುತ್ತಿದ್ದಾರೆ. ನಾಳೆ ನಡೆಯಲಿರುವ ಐಸಿಸಿ ಸಭೆಯಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಲ್ಲಿ ನೀರು ಹರಿಸಿದರೆ ತೋಟಗಳು ಉಳಿಯುತ್ತವೆ. ಇಲ್ಲದಿದ್ದರೆ ತುಂಬಾನೇ ಕಷ್ಟವಾಗುತ್ತದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.





Leave a comment