Home ದಾವಣಗೆರೆ ಬಿಜೆಪಿ 3.0ನಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಮುಖ ಹುದ್ದೆಗಳ ಧಮಾಕ: ಸ್ಮೃತಿ ಇರಾನಿ ಬಿಗ್ ಕಮ್‌ಬ್ಯಾಕ್, ಕರ್ನಾಟಕದ ಬಿ. ಎಲ್. ಸಂತೋಷ್ ಮುಂದುವರಿಕೆ, ನೇಮಕದ ಹಿಂದಿದೆ ದೊಡ್ಡ ಯೋಜನೆ!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿ 3.0ನಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಮುಖ ಹುದ್ದೆಗಳ ಧಮಾಕ: ಸ್ಮೃತಿ ಇರಾನಿ ಬಿಗ್ ಕಮ್‌ಬ್ಯಾಕ್, ಕರ್ನಾಟಕದ ಬಿ. ಎಲ್. ಸಂತೋಷ್ ಮುಂದುವರಿಕೆ, ನೇಮಕದ ಹಿಂದಿದೆ ದೊಡ್ಡ ಯೋಜನೆ!

Share
ಸ್ಮೃತಿ ಇರಾನಿ
Share

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಮ್ಮ ನೂತನ ಪದಾಧಿಕಾರಿಗಳ ತಂಡವನ್ನು ಪ್ರಕಟಿಸಿದ್ದು, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಮುಖ ಸಂಘಟನಾತ್ಮಕ ಹೊಣೆಗಾರಿಕೆ ನೀಡಲಾಗಿದೆ. ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಇದು ಅವರ ರಾಜಕೀಯ ಜೀವನದಲ್ಲಿ ದೊಡ್ಡ ಪುನರಾಗಮನ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನ್ನು ಕರ್ನಾಟಕದ ಬಿ. ಎಲ್. ಸಂತೋಷ್ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ 6 ಸ್ಥಾನಗಳನ್ನು ಮಹಿಳಾ ನಾಯಕಿಯರಿಗೆ ನೀಡಲಾಗಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಮುಂದುವರಿಸಲಾಗಿದ್ದು, ಡಿ. ಪುರಂದೇಶ್ವರಿ ಮತ್ತು ಡಾ. ಭಾರತಿ ಪ್ರವೀಣ್ ಪವಾರ್ ಸೇರಿದಂತೆ ಹಲವು ಮಹಿಳಾ ನಾಯಕಿಯರು ಪ್ರಮುಖ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.

ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ಮುಂದುವರಿಯಲಿದ್ದು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯನ್ನಾಗಿ ನೇಮಕ ಮಾಡಲಾಗಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ನಾಯಕರಿಗೂ ಹೊಸ ತಂಡದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.