SUDDIKSHANA KANNADA NEWS/ DAVANAGERE/ DATE:24-01-2025
ದಾವಣಗೆರೆ: ವಿದೂಷಿ ಮಾಧವಿ ಡಿ.ಕೆ. ಅವರಿಗೆ ಭರತನಾಟ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಾಗಿ “ಏಷ್ಯಾ ಫೆಸಿಫಿಕ್ ಐಕಾನಿಕ್ ಪ್ರಶಸ್ತಿ -2025 ಪ್ರದಾನ ಮಾಡಲಾಯಿತು.
ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ವತಿಯಿಂದ, ಭರತನಾಟ್ಯ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆಗಾಗಿ ದಾವಣಗೆರೆಯ ಪ್ರತಿಷ್ಠಿತ ನಮನ ಅಕಾಡೆಮಿ ದಾವಣಗೆರೆ ಸಂಸ್ಥಾಪಕಿ ಕಾರ್ಯದರ್ಶಿ ಹಾಗೂ ಹಾಗೂ ಗುರುಗಳಾದ ವಿದೂಷಿ ಮಾಧವಿ ಡಿ.ಕೆ. ಅವರಿಗೆ “ಏಷ್ಯಾ ಫೆಸಿಫಿಕ್ ಐಕಾನಿಕ್ ಅವಾರ್ಡ್ ನೀಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇಂಡೋನೇಶಿಯಾದ ಬಾಲಿಯ ಏಸ್ಟಿನ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು. ಮಾಧವಿ ಡಿ.ಕೆ. ಅವರು ಭರತನಾಟ್ಯ ಕಲೆಯನ್ನು ಕೇವಲ ಭಾರತದ ಮಟ್ಟಿಗೆ ಮಾತ್ರ ಸೀಮಿತವಾಗಿಸದೆೇ, ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡುವಲ್ಲಿ ಅಪಾರ ಯಶಸ್ಸು ಸಾಧಿಸಿದ್ದಾರೆ. ಅವರ ಶಿಷ್ಯವೃಂದ ಮತ್ತು ಕಲಾಪ್ರಪಂಚದಲ್ಲಿ ಅವರು ಸಾಧಿಸಿರುವ ಹೆಜ್ಜೆ ಗುರುತುಗಳು ಈ ಪ್ರಶಸ್ತಿಗೆ ಕಾರಣವಾಗಿದೆ.
ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್‌ನ ಉನ್ನತ ಸದಸ್ಯರು ಅವರ ಸಾಧನೆಯನ್ನು ಶ್ಲಾಘಿಸಿ, ಭರತನಾಟ್ಯದ ಮೂಲಕ ವಿಶ್ವಶಾಂತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸಲು ಮಾಡಿದ ಅವರ ಪ್ರಯತ್ನವನ್ನು ಹೊಗಳಿದರು.
ಈ ಪ್ರಶಸ್ತಿ ಸಮಾರಂಭದಲ್ಲಿ ದೇಶ ವಿದೇಶದ ಗಣ್ಯರು, ಕಲಾವಿದರು ಮತ್ತು ಸಾಂಸ್ಕೃತಿಕ ಕಲಾಸಕ್ತರು ಉಪಸ್ಥಿತರಿದ್ದರು. ಇದು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದ ಮುಂದೆ ಮತ್ತೊಮ್ಮೆ ತೋರಿಸಿರುವ ಸ್ಮರಣೀಯ ಕ್ಷಣವಾಗಿದೆ ಎಂದು ಮಾಧವಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.