Home ದಾವಣಗೆರೆ “ಆರ್‌ಎಸ್‌ಎಸ್ ಅಂಡರ್‌ವರ್ಲ್ಡ್ ಮಾಫಿಯಾನಾ?” “ನಮ್ಮಲ್ಲಿ ಹರಿಯೋದು ಅಂಬೇಡ್ಕರ್ ರಕ್ತ, ಗೊಡ್ಡು ದೊಣ್ಣೆಗಳಿಗೆ ಹೆದರಲ್ಲ”: ಪ್ರಿಯಾಂಕ್ ಖರ್ಗೆ ಕೌಂಟರ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಆರ್‌ಎಸ್‌ಎಸ್ ಅಂಡರ್‌ವರ್ಲ್ಡ್ ಮಾಫಿಯಾನಾ?” “ನಮ್ಮಲ್ಲಿ ಹರಿಯೋದು ಅಂಬೇಡ್ಕರ್ ರಕ್ತ, ಗೊಡ್ಡು ದೊಣ್ಣೆಗಳಿಗೆ ಹೆದರಲ್ಲ”: ಪ್ರಿಯಾಂಕ್ ಖರ್ಗೆ ಕೌಂಟರ್!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: “ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು” ಎಂಬ ಹೇಳಿಕೆಗೆ ಬಿಜೆಪಿ ನಾಯಕರು ಆತಂಕಗೊಂಡಿರುವುದನ್ನು ನೋಡಿದರೆ, ‘ಕುಂಬಳಕಾಯಿ ಕದ್ದವ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ’ ಗಾದೆಯ ಸ್ಥಿತಿ ನೆನಪಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷದ ನಾಯಕ R. ಅಶೋಕ್ ಅವರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಆರ್‌ಎಸ್‌ಎಸ್ ಅಂಡರ್‌ವರ್ಲ್ಡ್ ಮಾಫಿಯಾನಾ?”

“ಆರ್‌ಎಸ್‌ಎಸ್ ಎದುರು ಹಾಕಿಕೊಂಡರೆ ನೀವು ಮನೆಯಿಂದ ಆಚೆ ಬರಲು ಆಗುವುದಿಲ್ಲ” ಎಂಬ R. ಅಶೋಕ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಸಚಿವರು, “ಈ ಬೆದರಿಕೆ ಮಾತುಗಳ ಹಿಂದಿನ ಅರ್ಥವೇನು? ಆರ್‌ಎಸ್‌ಎಸ್ ಎನ್ನುವುದು ಭಯೋತ್ಪಾದಕ ಸಂಘಟನೆಯೇ? ಅಥವಾ ಪ್ರಶ್ನಿಸಿದವರನ್ನು ಮುಗಿಸುವ ಅಂಡರ್‌ವರ್ಲ್ಡ್ ಮಾಫಿಯಾವೇ? ಇಂತಹ ಬೆದರಿಕೆ ಹಾಕುತ್ತಿದ್ದಾರೆಂದರೆ ಆರ್‌ಎಸ್‌ಎಸ್ ಕ್ರಿಮಿನಲ್‌ಗಳ ಸಮೂಹ ಇರಬಹುದೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

“ನಮ್ಮಲ್ಲಿ ಹರಿಯುತ್ತಿರುವುದು ಅಂಬೇಡ್ಕರ್ ರಕ್ತ”

ತಮಗೆ ಬಂದಿರುವ ಬೆದರಿಕೆಗಳಿಗೆ ಖಂಡಿತವಾಗಿ ಉತ್ತರಿಸಿದ ಪ್ರಿಯಾಂಕ್ ಖರ್ಗೆ:

“ನಾನು ಮನೆಯಿಂದ ಆಚೆ ಬರುವುದಕ್ಕೆ ಭಾರತದ ಸಂವಿಧಾನದ ರಕ್ಷಣೆ ಇದೆ. ನಾನು ಮುಕ್ತವಾಗಿ ಮಾತನಾಡಲು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ನೈತಿಕ ಧೈರ್ಯವಿದೆ. ನಿಮ್ಮ ಆರ್‌ಎಸ್‌ಎಸ್‌ನ ಗೊಡ್ಡು ದೊಣ್ಣೆಗಳಿಗೆ ಹೆದರಲು ನನ್ನಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ, ನಮ್ಮದು ಅಂಬೇಡ್ಕರ್ ರಕ್ತ. ಅಂಬೇಡ್ಕರ್ ಅವರು ನಮಗೆ ಧೈರ್ಯವನ್ನು ನೀಡಿದ್ದಾರೆಯೇ ಹೊರತು ಭಯವನ್ನಲ್ಲ!”

ಸಾರ್ವಜನಿಕ ಆಸ್ತಿ ಮತ್ತು ನಿಯಮಗಳ ಪಾಲನೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಸಚಿವರು ಪುನರುಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles