Home ದಾವಣಗೆರೆ ‘ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಟ’: ನಟಿ ಕೋಮಲ್ ಜೊತೆ ಕಾಣಿಸಿಕೊಂಡ ನಟ ಗೋವಿಂದಾಗೆ ಪತ್ನಿಯಿಂದ ಶಾಕಿಂಗ್ ಕೌಂಟರ್
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಟ’: ನಟಿ ಕೋಮಲ್ ಜೊತೆ ಕಾಣಿಸಿಕೊಂಡ ನಟ ಗೋವಿಂದಾಗೆ ಪತ್ನಿಯಿಂದ ಶಾಕಿಂಗ್ ಕೌಂಟರ್

Share
ಗೋವಿಂದಾ
Share

ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನಿತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಮತ್ತು ಅಫೇರ್ ವದಂತಿಗಳು ಮತ್ತೆ ಬಿರುಸಿನ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನವನಟಿ ಕೋಮಲ್ ರಾಣಿ ಸ್ವರ್ಣಕಾರ್ ಜೊತೆ ಗೋವಿಂದಾ ಕಾಣಿಸಿಕೊಂಡ ಬೆನ್ನಲ್ಲೇ, ಪತ್ನಿ ಸುನಿತಾ ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಪರಾಜಿಗಳು ಗೋವಿಂದಾ ಅವರ ಸಾರ್ವಜನಿಕ ಓಡಾಟದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸುನಿತಾ, “ಸಿನಿಮಾ ಇನ್ನು ಬಿಡುಗಡೆಯೇ ಆಗಿಲ್ಲ, ಪ್ರಚಾರವೇ ಶುರುವಾಗಿಲ್ಲ. ಸಿನಿಮಾ ಬರದೇ ಪ್ರಚಾರ ಹೇಗೆ ಸಾಧ್ಯ? ಮಗಳ ವಯಸ್ಸಿನ ಹುಡುಗಿಯನ್ನು ಕರೆದುಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಕನಿಷ್ಠ ಸ್ವಲ್ಪನಾದರೂ ನಾಚಿಕೆ ಇರಬೇಕು. ಜೀವನದಲ್ಲಿ ಒಂದಿಷ್ಟು ಸ್ಟ್ಯಾಂಡರ್ಡ್ ಕಾಯ್ದುಕೊಳ್ಳಬೇಕು” ಎಂದು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ.

ಅಲ್ಲದೆ ನಟಿ ಕೋಮಲ್ ಅವರ ಡ್ರೆಸ್ಸಿಂಗ್ ಶೈಲಿ ಹಾಗೂ ಉಡುಪಿನ ಬಗ್ಗೆಯೂ ವ್ಯಂಗ್ಯವಾಡಿದ ಸುನಿತಾ, “ನಿಮ್ಮ ‘ಶುಗರ್ ಡ್ಯಾಡಿ’ ಅಷ್ಟೊಂದು ಶ್ರೀಮಂತನಾಗಿದ್ದರೆ, ಕನಿಷ್ಠ ಉತ್ತಮವಾದ ಬಟ್ಟೆಯನ್ನಾದರೂ ಧರಿಸಿ. ನಮ್ಮನ್ನು ನೋಡಿ, ನಾವು ಎಂಥ ಸೈಲ್‌ನಲ್ಲಿ ಓಡಾಡುತ್ತೇವೆ” ಎಂದು ಖಾರವಾಗಿ ಟಾಂಗ್ ನೀಡಿದ್ದಾರೆ.

ಯಾರೀ ಕೋಮಲ್ ರಾಣಿ ಸ್ವರ್ಣಕಾರ್?

ಕೋಮಲ್ ರಾಣಿ ಸ್ವರ್ಣಕಾರ್ ಬಾಲಿವುಡ್‌ಗೆ ಹೊಸಬರಾಗಿದ್ದು, ಗೋವಿಂದಾ ನಿರ್ಮಾಣ ಮಾಡುತ್ತಿರುವ ಮುಂಬರುವ ‘ರೂಪಾ’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಗೋವಿಂದಾ ಅವರ ಮತ್ತೊಂದು ಯೋಜನೆಯಾದ ‘ದುನಿಯಾದಾರಿ’ ಚಿತ್ರದಲ್ಲೂ ಇವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮುಂದುವರಿದ ದಾಂಪತ್ಯದ ಬಿರುಕು:

1987ರಲ್ಲಿ ವಿವಾಹವಾದ ಗೋವಿಂದಾ ಮತ್ತು ಸುನಿತಾ ಅವರಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಗೋವಿಂದಾ ಅವರ ಅಫೇರ್ ಹಾಗೂ ಹಣಕಾಸಿನ ಲಾಭಕ್ಕಾಗಿ ಹಿರಿಯ ನಟರನ್ನು ಬಳಸಿಕೊಳ್ಳುವ ಯುವ ನಟಿಯರ ಬಗ್ಗೆ ಸುನಿತಾ ಹಲವು ಬಾರಿ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles