Home ದಾವಣಗೆರೆ ಅಡಿಕೆ ನಿಷೇಧವಲ್ಲ, ಪಾನ್ ಮಸಾಲಾ – ಗುಟ್ಕಾ ಬ್ಯಾನ್ ಆದೇಶ ಅಧಿಕಾರಿಗಳು ಮಾಡಿದ ತಪ್ಪಿನಿಂದ ಆದ ಗೊಂದಲ: ಸ್ಪಷ್ಟನೆ ಕೊಟ್ಟ ಶಿವಗಂಗಾ ಬಸವರಾಜ್!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಅಡಿಕೆ ನಿಷೇಧವಲ್ಲ, ಪಾನ್ ಮಸಾಲಾ – ಗುಟ್ಕಾ ಬ್ಯಾನ್ ಆದೇಶ ಅಧಿಕಾರಿಗಳು ಮಾಡಿದ ತಪ್ಪಿನಿಂದ ಆದ ಗೊಂದಲ: ಸ್ಪಷ್ಟನೆ ಕೊಟ್ಟ ಶಿವಗಂಗಾ ಬಸವರಾಜ್!

Share
ಶಿವಗಂಗಾ ಬಸವರಾಜ್
Share

ದಾವಣಗೆರೆ / ಚನ್ನಗಿರಿ: ರಾಜ್ಯದಲ್ಲಿ ಅಡಿಕೆ ನಿಷೇಧಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಬಿದ್ದಿದ್ದು, ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಧೃತಿಗೆಡುವ ಅಗತ್ಯವಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಮಾತನಾಡಿದ ಶಾಸಕರು, ಅಡಿಕೆ ನಿಷೇಧದ ಕುರಿತು ಹರಡುತ್ತಿರುವ ಸುದ್ದಿಗಳು ಕೇವಲ ಅಧಿಕಾರಿಗಳ ಗೊಂದಲದಿಂದ ಸೃಷ್ಟಿಯಾಗಿವೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ವಿಚಾರದ ಬಗ್ಗೆ ಅಡಿಕೆ ಹೆಚ್ಚು ಬೆಳೆಯುವ ಕ್ಷೇತ್ರಗಳ ಶಾಸಕರು ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿ ಅವರಿಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಮಾಡಿರಬಹುದು. ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಮಾಡುತ್ತೇವೆಂದು ಸರ್ಕಾರ ಹೇಳಿಲ್ಲ. ಈ ಬಗ್ಗೆ ಘೋಷಿಸಿಯೂ ಇಲ್ಲ. ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

ತಂಬಾಕು, ನಿಕೋಟಿನ್‌ಗೆ ಮಾತ್ರ ನಿಷೇಧ ಅನ್ವಯ

“ಪಾನ್ ಮಸಾಲಾ ಹಾಗೂ ಗುಟ್ಕಾದಲ್ಲಿ ತಂಬಾಕು (Tobacco) ಮತ್ತು ನಿಕೋಟಿನ್ (Nicotine) ಅಂಶಗಳನ್ನು ಸೇರಿಸಿ ಮಾರಾಟ ಮಾಡುವುದಕ್ಕೆ ಮಾತ್ರ ಸರ್ಕಾರ ನಿಷೇಧ ಹೇರಿದೆ. ಕೇವಲ ಅಡಿಕೆಯನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು.

ಅಡಿಕೆ ಈಗಾಗಲೇ ‘ಆಹಾರ ಪದಾರ್ಥ’ ಎಂದು ಘೋಷಣೆಯಾಗಿದ್ದು, ರೈತರ ಹಿತಕಾಯಲು ಸರ್ಕಾರ ಹಾಗೂ ರಾಜ್ಯದ ಎಲ್ಲಾ ಶಾಸಕರು ಪಕ್ಷಭೇದ ಮರೆತು ಬದ್ಧರಾಗಿದ್ದಾರೆ” ಎಂದು ಶಿವಗಂಗಾ ಬಸವರಾಜ್ ಭರವಸೆ ನೀಡಿದರು.

ರೈತರಿಗೆ ಧೈರ್ಯ ತುಂಬಿದ ಶಾಸಕರು

ಚನ್ನಗಿರಿ ಕ್ಷೇತ್ರವು ರಾಜ್ಯದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಗಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ವ್ಯತ್ಯಾಸವಾಗುತ್ತಿರುವುದಕ್ಕೆ ಆತಂಕ ಪಡದೆ, ರೈತರು ಸ್ವಲ್ಪ ಸಮಾಧಾನದಿಂದ ಕಾಯಬೇಕು. ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿಗೆ ಧಕ್ಕೆ ಬರಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು

Share

Leave a comment

Leave a Reply

Your email address will not be published. Required fields are marked *