Home ದಾವಣಗೆರೆ ಗುಟ್ಕಾ, ಪಾನ್‌ಮಸಾಲಾ ಬ್ಯಾನ್‌ಗೆ ಸಿಎಂ ಡಿ. ಕೆ. ಶಿವಕುಮಾರ್ ಬ್ರೇಕ್: ಆದೇಶ ರದ್ದಾಗುತ್ತಿದ್ದಂತೆ ಅಡಿಕೆ ಬೆಳೆಗಾರರಿಗೆ ದೊಡ್ಡ ರಿಲೀಫ್!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಗುಟ್ಕಾ, ಪಾನ್‌ಮಸಾಲಾ ಬ್ಯಾನ್‌ಗೆ ಸಿಎಂ ಡಿ. ಕೆ. ಶಿವಕುಮಾರ್ ಬ್ರೇಕ್: ಆದೇಶ ರದ್ದಾಗುತ್ತಿದ್ದಂತೆ ಅಡಿಕೆ ಬೆಳೆಗಾರರಿಗೆ ದೊಡ್ಡ ರಿಲೀಫ್!

Share
ಗುಟ್ಕಾ
Share

ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳ ಆದೇಶಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬ್ರೇಕ್ ಹಾಕಿದ್ದಾರೆ. ಮಾತ್ರವಲ್ಲ, ಆದೇಶ ಮಾಡಿದ ಎರಡೇ ದಿನಕ್ಕೆ ವಾಪಸ್ ಪಡೆದಿದ್ದಾರೆ. ಈ ಮೂಲಕ ಅಡಿಕೆ ಬೆಳೆಗಾರರ ಮೊಗದಲ್ಲಿ ಮೂಡಿದ್ದ ಕಾರ್ಮೋಡ ಮರೆಯಾದಂತಿದೆ.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಹೊನ್ನಾಳಿ ಶಾಸಕ ಶಾಂತನಗೌಡ ನೇತೃತ್ವದ ನಿಯೋಗವು ಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುಟ್ಕಾ ಮತ್ತು ಪಾನ್ ಮಸಾಲಾ ಬ್ಯಾನ್ ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿತ್ತು. ಇದನ್ನು ಪರಿಗಣಿಸಿದ ಸಿಎಂ ಡಿ. ಕೆ. ಶಿವಕುಮಾರ್ ಅವರು ಆಹಾರ ಸುರಕ್ಷತಾ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಎಲ್ಲವನ್ನೂ ಪರಾಮರ್ಶಿಸಿ ಆದೇಶಿಸುವಂತೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಡಕೆ ಬೆಳೆಗಾರರ ಬೆಲೆ ಅರಿತುಕೊಳ್ಳಬೇಕು. ಇಡೀ ದೇಶದಲ್ಲಿ 9,49,400 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಬೆಳೆಯಲಾಗುತ್ತದೆ. ಅದರಲ್ಲಿ ಕರ್ನಾಕದಲ್ಲಿ ಒಂದೇ ರಾಜ್ಯದಲ್ಲಿ 6,76,940 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು.

ಇಡೀ ದೇಶದಲ್ಲಿ 14,10,960 ಟನ್‌ಗಳು ಅಡಕೆ ಬೆಳೆದರೆ, ಕರ್ನಾಟಕವೊಂದರಲ್ಲೇ 10,32,020 ಟನ್‌ ಅಡಕೆ ಉತ್ಪಾದನೆ ಮಾಡಲಾಗುತ್ತದೆ. ಅಂದರೆ ಒಟ್ಟು ಅಡಕೆ ಬೆಳೆಯ ಶೇ 76 ರಷ್ಟು ಅಡಕೆ ಬೆಳೆ ಕರ್ನಾಟಕವೊಂದರಲ್ಲೇ ಬೆಳೆಯಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು.

ಇಡೀ ದೇಶದಲ್ಲಿ ಅಡಕೆ GST ಕೊಡುಗೆ 600 ಕೋಟಿ ರೂಪಾಯಿ ಆದರೆ ಕರ್ನಾಟಕ ರಾಜ್ಯವೊಂದೇ 465 ಕೋಟಿ ರೂಪಾಯಿ GST ಕೊಡುಗೆ ನೀಡುತ್ತಿದೆ. ಅಡಕೆ ಕರ್ನಾಟಕದ 8 ಜಿಲ್ಲೆಗಳ ಪ್ರಮುಖ ಜೀವನಾಧಾರ ವಾಣಿಜ್ಯ ಬೆಳೆಯಾಗಿದೆ. ಸುಮಾರು ಒಂದೂವರೆ ಕೋಟಿ ಕುಟುಂಬಗಳು ನೇರ ಮತ್ತು ಪರೋಕ್ಷವಾಗಿ ಅಡಕೆ ಬೆಳೆ ಆಧರಿಸಿ ಜೀವನ ನಡೆಸುತ್ತಿದ್ದಾರೆ. ಈ ಮೂಲಭೂತ ಸಂಗತಿಗಳು ಈ ಸರಕಾರಕ್ಕೆ ಗೊತ್ತಿದಿಯೋ ಗೊತ್ತಿಲ್ಲವೋ ಎಂಬುದು ಅರ್ಥವಾಗದ ಸಂಗತಿ. ಅಡಕೆ ಆರೋಗ್ಯ ವರ್ಧಕ. ಆರೋಗ್ಯಕ್ಕೆ ಪೂರಕ ಎಂಬುದನ್ನು ಆಯುರ್ವೇದದಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಸರಕಾರಕ್ಕೆ ಸಾರಾಯಿ,ಸಿಗರೇಟ್ ಮಾರಾಟ ನಿಷೇಧ ಮಾಡುವ ಧಮ್ ಇಲ್ಲ,ರಾಜ್ಯದ ಉದ್ದಗಲಕ್ಕೂ ಸಾರಾಯಿ ಮಾರಾಟ ಹೆಚ್ಚಳಕ್ಕೆ ಅಬಕಾರಿ ಇಲಾಖೆಯಿಂದ ಟಾರ್ಗೆಟ್ ಕೊಟ್ಟು ದಿನಸಿ ಅಂಗಡಿಗಳಲ್ಲೂ ಸಾರಾಯಿ ಮಾರಾಟ ಮಾಡಿಸುತ್ತಿರುವ ಕುಖ್ಯಾತಿ ಹೊಂದಿರುವ ಕಾಂಗ್ರೆಸ್ ಸರ್ಕಾರ ಗುಟ್ಕಾ ನಿಷೇಧದ ವಸೂಲಿ ದಂಧೆಗೆ ಕೈಹಾಕಿದೆ. ಈ ತೀರ್ಮಾನ ತಕ್ಷಣ ಹಿಂತೆಗೆದುಕೊಳ್ಳದೆ ಹೋದರೆ ಮುಂದೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ವಿಪಕ್ಷಗಳು ಎಚ್ಚರಿಕೆ ನೀಡಿದ್ದವು.

Share

Leave a comment

Leave a Reply

Your email address will not be published. Required fields are marked *

Related Articles