Home ಕ್ರೈಂ ನ್ಯೂಸ್ ಮಂಡಿ ಶಸ್ತ್ರಚಿಕ್ಸೆಯ ಬಳಿಕವೂ ಸಿಗದ WFH: ನೋಟಿಸ್ ಪೀರಿಯಡ್‌ನಲ್ಲಿರುವ ಪುಣೆ ಟೆಕ್ಕಿಯ ಅಳಲು, ಕಾನೂನುಬದ್ಧ ಹಕ್ಕುಗಳ ಬಗ್ಗೆ ಚರ್ಚೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಂಡಿ ಶಸ್ತ್ರಚಿಕ್ಸೆಯ ಬಳಿಕವೂ ಸಿಗದ WFH: ನೋಟಿಸ್ ಪೀರಿಯಡ್‌ನಲ್ಲಿರುವ ಪುಣೆ ಟೆಕ್ಕಿಯ ಅಳಲು, ಕಾನೂನುಬದ್ಧ ಹಕ್ಕುಗಳ ಬಗ್ಗೆ ಚರ್ಚೆ!

Share
ಟೆಕ್ಕಿ
Share

ಪುಣೆ: ಭಾರತದ ಐಟಿ ಹಾಗೂ ಕಾರ್ಪೊರೇಟ್ ವಲಯಗಳಲ್ಲಿ ‘ವರ್ಕ್ ಫ್ರಮ್ ಹೋಮ್’ (WFH) ನೀಡುವ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದ್ದು, ಇದು ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪುಣೆಯ ಸಾಫ್ಟ್‌ವೇರ್ ಡೆವಲಪರ್‌ ಒಬ್ಬರು ತಮಗೆ ನಿಗದಿಯಾಗಿರುವ ಮಂಡಿ ಶಸ್ತ್ರಚಿಕ್ಸೆಯ ಕಾರಣದಿಂದಾಗಿ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಕೋರಿದ್ದ ಅರ್ಜಿಯನ್ನು HR ವಿಭಾಗ ತಿರಸ್ಕರಿಸಿದೆ.

ScleaverZer0ne ಎಂಬ ಬಳಕೆದಾರ ಹೆಸರಿನಲ್ಲಿ Reddit ನ r/IndianWorkplace ಸಮುದಾಯದಲ್ಲಿ ಪೋಸ್ಟ್ ಮಾಡಿರುವ ಈ ಟೆಕ್ಕಿ, ಶಸ್ತ್ರಚಿಕ್ಸೆಯ ನಂತರ ತಮಗೆ ಆಫೀಸ್‌ಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದ್ದಾರೆ. “ನನ್ನ ಕೆಲಸವನ್ನು ಸಂಪೂರ್ಣವಾಗಿ ಮನೆಯಿಂದಲೇ ನಿರ್ವಹಿಸಬಹುದು. ಇತರ ಉದ್ಯೋಗಿಗಳಿಗೆ ಅಜೂರ್ ವರ್ಚುವಲ್ ಡೆಸ್ಕ್‌ಟಾಪ್ (AVD) ಮೂಲಕ WFH ನೀಡಲಾಗಿದೆ, ನಾನು ಕೂಡ ಆ ಲೈಸೆನ್ಸ್ ವೆಚ್ಚವನ್ನು ತಾನೇ ಭರಿಸಲು ಸಿದ್ಧನಿದ್ದೇನೆ ಎಂದರೂ HR ನಿರಾಕರಿಸಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಸ್ತುತ ತಾವು ನೋಟಿಸ್ ಪೀರಿಯಡ್‌ನಲ್ಲಿ ಇರುವುದರಿಂದ, ಮೆಡಿಕಲ್ ಲೀವ್ (Sick Leave) ತೆಗೆದುಕೊಂಡರೆ ಕಂಪನಿಯು ಸೇವಾವಧಿಯನ್ನು ಹೆಚ್ಚಿಸಿ, ರಿಲೀವಿಂಗ್ ದಿನಾಂಕವನ್ನು ಮುಂದೂಡಬಹುದು ಎಂಬ ಆತಂಕದಲ್ಲಿದ್ದಾರೆ.

ಕಾಲು ಶಸ್ತ್ರಚಿಕ್ಸೆಯ ನಂತರ ಮನೆಯಿಂದಲೇ ಕೆಲಸ ಮಾಡಲು ಅನುಮತಿ ಕೇಳಿದ ಪುಣೆಯ ಸಾಫ್ಟ್‌ವೇರ್ ಡೆವಲಪರ್‌ಗೆ HR ವಿಭಾಗ WFH ನಿರಾಕರಿಸಿದೆ. ನೋಟಿಸ್ ಪೀರಿಯಡ್‌ನಲ್ಲಿರುವ ಈ ಉದ್ಯೋಗಿಯ ಪರಿಸ್ಥಿತಿ ಹಾಗೂ ಭಾರತದಲ್ಲಿ WFH ನಿಯಮಾವಳಿಗಳ ಕುರಿತು ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ವೀಲ್‌ಚೇರ್ ಅಥವಾ ಆಂಬ್ಯುಲೆನ್ಸ್‌ ಮೂಲಕ ಆಫೀಸ್‌ಗೆ ತೆರಳಿ ಪ್ರತಿಭಟಿಸಲು ಹಾಸ್ಯಸ್ಪದವಾಗಿ ಸಲಹೆ ನೀಡಿದ್ದಾರೆ. ಆದರೆ, ಕಾನೂನು ತಜ್ಞರ ಪ್ರಕಾರ, ಭಾರತದ ಶ್ರಮಿಕ ಕಾನೂನುಗಳಲ್ಲಿ (Labour Laws) WFH ಎಂಬುದು ಉದ್ಯೋಗಿಯ ಕಾನೂನುಬದ್ಧ ಹಕ್ಕಲ್ಲ; ಅದು ಸಂಪೂರ್ಣವಾಗಿ ಕಂಪನಿಯ ಆಡಳಿತ ಮಂಡಳಿಯ ನಿರ್ಧಾರಕ್ಕೆ ಸೇರಿದ್ದಾಗಿದೆ.

Share

Leave a comment

Leave a Reply

Your email address will not be published. Required fields are marked *