SUDDIKSHANA KANNADA NEWS/ DAVANAGERE/ DATE:16-01-2025
ಶಿವಮೊಗ್ಗ: ವೈದ್ಯೆ ಹಾಗೂ ನರ್ಸ್ ನಡುವಿನ ಜಗಳ ವಿಪರೀತಕ್ಕೆ ಹೋಗಿದ್ದು, ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಭದ್ರಾವತಿ ಗ್ರಾಮಾಂತರ ಭಾಗದ ಆಸ್ಪತ್ರೆಯಲ್ಲಿ.
ವೈದ್ಯೆ ಡಾ. ಹಂಸವೇಣಿ ಹಾಗೂ ನರ್ಸ್ ಸಕನ್ಯಾ ಆಸ್ಪತ್ರೆಗೆ ಯತ್ನಿಸಿದವರು.
ಘಟನೆ ಹಿನ್ನೆಲೆ ಏನು…?
ಕಳೆದ 5 ವರ್ಷಗಳ ಹಿಂದೆ ನಿಯೋಜನೆ ಮೇರೆಗೆ ಭದ್ರಾವತಿಯ ಬಿಆರ್ ಪಿ ಆಸ್ಪತ್ರೆಯಲ್ಲಿ ಸುಕನ್ಯಾ ನರ್ಸ್ ಆಗಿ ಕೆಲಸಕ್ಕೆ ಬಂದಿದ್ದರು. ಬಿಆರ್ ಪಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಇವರು ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ. ಡಾ. ಹಂಸವೇಣಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನರ್ಸ್ ಸುಕನ್ಯಾ ಆತ್ಮಹತ್ಯೆಗೆ ಯತ್ನಿಸಿದರೆ, ಒಂದು ಗಂಟೆ ಬಳಿಕ ಡಾ. ಹಂಸವೇಣಿ ಅವರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಆತ್ಮಹತ್ಯೆ ನಾಟಕವಾಡಿದ್ದಾರೆ.
ಭದ್ರಾವತಿ ಬಿಆರ್ ಪಿ ಆಸ್ಪತ್ರೆಯಲ್ಲಿ ನರ್ಸ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆ, ಹೆದರಿದ ಡಾ. ಹಂಸವೇಣಿಯೂ ಸೂಸೈಡ್ ಗೆ ಯತ್ನಿಸಿದ್ದಾರೆ. ಮಹಿಳಾ ವೈದ್ಯೆಯ ವಿರುದ್ಧ ಮಾನಸಿಕ ಕಿರುಕುಳ ಆರೋಪ ಹೊರಿಸಿ ಮಹಿಳಾ ನರ್ಸ್ ನಿಂದ ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ಡಾ. ಹಂಸವೇಣಿ ಅವರೂ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸುಕನ್ಯಾ ಅಸ್ವಸ್ಥಗೊಂಡಿದ್ದರು. ಅವರನ್ನ ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಕನ್ಯಾರನ್ನು ಭೇಟಿ ಮಾಡಿದ ಡಿಹೆಚ್ ಒ ಡಾ. ನಟರಾಜ್ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸುಕನ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದ ಡಿಎಚ್ಒ ತಿಳಿಸಿದ್ದಾರೆ. ಘಟನೆಗೆ ವೈಯಕ್ತಿಕ ವಿಷಯ ಕಾರಣ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ವೈಯಕ್ತಿಕ ಘಟನೆ ಈ ಮಟ್ಟಕ್ಕೆ ಹೋಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ. ನಟರಾಜ್ ಮಾಹಿತಿ ನೀಡಿದ್ದಾರೆ.