ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರಥಮ ಆರ್ಬಿಟಲ್‌ – ಅಥೆರೆಕ್ಟಮಿ: ಎಸ್‌ ಎಸ್‌ ನಾರಾಯಣ ಆಸ್ಪತ್ರೆ ವೈದ್ಯರ ಆಪರೇಷನ್ ಸಕ್ಸಸ್!

On: January 16, 2025 11:23 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:16-01-2025

ದಾವಣಗೆರೆ: ಆರ್ಬಿಟಲ್‌ ಅಥೆರೆಕ್ಟಮಿ ಎಂಬ ಎರಡು ಕ್ಲಿಷ್ಟಕರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿ ಇಲ್ಲಿನ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ವಿಶೇಷ ಸಾಧನೆಗೈದಿದ್ದು ವಿಶೇಷವೆಂದರೆ ಇದು ಮಧ್ಯ ಕರ್ನಾಟಕದಲ್ಲಿ ನೇರವೇರಿಸಿದ ಪ್ರಪ್ರಥಮ ಚಿಕಿತ್ಸೆಯಾಗಿದೆ.

ಹಿರಿಯ ಹೃದ್ರೋಗ ತಜ್ಞ ಡಾ. ಧನಂಜಯ ಆರ್‌.ಎಸ್ ಹಾಗೂ ಅವರ ತಂಡ ಈ ಚಿಕಿತ್ಸೆಯನ್ನು ನೀಡಿದ್ದು ಇಬ್ಬರು ರೋಗಿಗಳು ಸಂಪೂರ್ಣ ಗುಣಮುಖರಾಗಿ ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಈ ಚಿಕಿತ್ಸೆಯಲ್ಲಿ ಡಾ. ಧನಂಜಯ ಅವರ ತಂಡ ಇಬ್ಬರೂ ರೋಗಿಗಳಲ್ಲಿ ಪರಿಧಮನಿಯ ಅಪಧಮನಿಗಳಲ್ಲಿ ( coronary arteries) ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಪರಿಚಲನೆ ಸುಗಮವಾಗದೇ ಹೃದಯ ಬೇನೆಯಿಂದ ಬಳಲುತ್ತಿದ್ದರು. ಇದನ್ನು ಅತ್ಯಂತ ನವೀನವಾದ ತಂತ್ರಜ್ಞಾನ ಆರ್ಬಿಟಲ್‌ ಅಥೆರೆಕ್ಟಮಿ ಚಿಕಿತ್ಸೆ ಮೂಲಕ ಪರಿಹರಿಸಿದ್ದಾರೆ.

ಏನಿದು ಚಿಕಿತ್ಸೆ?

ಆರ್ಬಿಟಲ್‌ ಅಥೆರೆಕ್ಟಮಿಯು ಆಂಜಿಯೋಪ್ಲಾಸ್ಟಿಗಳಿಗಾಗಿ ಕ್ಯಾಲ್ಸಿಯಂ ಶೇಖರಣೆಗೊಂಡ ಅಪಧಮನಿಗಳನ್ನು ಸ್ವಚ್ಛಗೊಳಿಸಲು  ಉಪಯೋಗಿಸುವ ತಂತ್ರಜ್ಞಾನವಾಗಿದೆ. ಇದರಲ್ಲಿ ಉಪಯೋಗಿಸುವ ಸಾಧನ ವಜ್ರದ ತುದಿ
ಹೊಂದಿದ್ದು, ಪ್ರತಿ ಸೆಕೆಂಡ್ ಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ಬಾರಿ ತಿರುಗುವ ಮೂಲಕ, ಅಪಧಮನಿಗಳಲ್ಲಿ ಜಮಾವಣೆಗೊಂಡ ಕ್ಯಾಲ್ಸಿಯಂನ್ನು ತೆಗೆದು ಹಾಕುತ್ತದೆ. ಇದರಿಂದ ಸ್ಟೆಂಟ್‌ ಹಾಕಲು ಇರುವ ಅಡೆತಡಗಳು ದೂರವಾಗಿ, ಸ್ಟೆಂಟ್‌ ಹಾಕಿದ ನಂತರ ಹೃದಯಕ್ಕೆ ರಕ್ತಸಂಚಾರ ಸರಾಗವಾಗಿ ತೊಂದರೆ ದೂರವಾಗುತ್ತದೆ.

ಸುಮಾರು 74ವರ್ಷದ ಹಿರಿಯರೊಬ್ಬರು ತೀವ್ರವಾದ ಹೃದಯ ಬೇನೆಯಿಂದ ದಾವಣಗೆರೆಯ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ವೈದ್ಯರು ಇವರ ಹೃದಯದ ಪರಿಧಮನಿಯ ಅಪಧಮನಿಗಳಲ್ಲಿ ( coronary arteries) ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಸಂಚಾರ ತೊಡಕಾಗುತ್ತಿರುವುದು ಎಂದು ತಿಳಿದು ಬಂದಿದೆ.

ಇದೇ ವೇಳೆ 66 ವರ್ಷದ ಹಿರಿಯ ವ್ಯಕ್ತಿಯು ಸಹ ಇದೇ ತರಹದ ಹೃದಯ ಬೇನೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು, ಇವರನ್ನು ಸಹ ತಪಾಸಣೆಗೆ ಒಳಪಡಿಸಿದಾಗ ಇವರಿಗೂ ಸಹ 74 ವರ್ಷದ ರೋಗಿ ತರಹ ಕ್ಯಾಲ್ಸಿಯಂ ಆರ್ಟರಿಗಳಲ್ಲಿ ಗಟ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಈ ಇಬ್ಬರು ರೋಗಿಗಳಿಗೆ, ಸುಗಮ ರಕ್ತ ಸಂಚಾರಕ್ಕೆ ಕ್ಯಾಲ್ಸಿಯಂ ಶೇಖರಣೆಯಿಂದ ಸ್ಟೆಂಟ್‌ ಅಳವಡಿಸುವುದು ಕ್ಲಿಷ್ಟಕರವಾಗಿತ್ತು. ಇದನ್ನು ಮನಗಂಡ ವೈದ್ಯರು ಆರ್ಬಿಟಲ್‌ ಅಥೆರೆಕ್ಟಮಿ ಎಂಬ ವಿನೂತನ ಮತ್ತು ಅತ್ಯಂತ ಸುಧಾರಿತ
ತಂತ್ರಜ್ಞಾನದ ಮೂಲಕ ಆರ್ಟರಿಗಳಲ್ಲಿ ಶೇಖರಣೆಗೊಂಡು ಗಟ್ಟಿಯಾಗಿದ್ದ ಕ್ಯಾಲ್ಸಿಯಂ ಅನ್ನು ತೆಗೆದು ಸ್ಟೆಂಟ್‌ ಅಳವಡಿಸಿ ರೋಗಿಗಳ ಜೀವವನ್ನು ಕಾಪಾಡಿದ್ದಾರೆ.

ಈ ನವೀನ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಡಾ. ಧನಂಜಯ “ ಆರ್ಬಿಟಲ್‌ ಅಥೆರೆಕ್ಟಮಿ ಎಂಬ ವಿನೂತನ ಚಿಕಿತ್ಸೆ ನಮ್ಮ ಮಧ್ಯ ಕರ್ನಾಟಕದ ಜನರಿಗೆ ಈಗ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿದೆ.
ಇತ್ತೀಚೆಗೆ ನಾವು ಈ ಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ನೀಡಿದ್ದೇವೆ, ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ ಅಲ್ಲದೆ ಬಹಳ ಬೇಗ ರೋಗಿಗಳು ಸಂಪೂರ್ಣವಾಗಿ ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯರೋಗಕ್ಕೆ ಸಂಬಂಧಿಸಿದ ಎಲ್ಲ ತರಹದ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ.

ಮಧ್ಯ ಕರ್ನಾಟಕದ ಜನರಿಗೆ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸೆ ನೀಡುವ ನಾರಾಯಣ ಹೆಲ್ತ್‌ ನ ಪ್ರಯತ್ನ ನಿರಂತರವಾಗಿರಲಿದೆ,” ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment