SUDDIKSHANA KANNADA NEWS/ DAVANAGERE/ DATE:15-01-2025
ನವದೆಹಲಿ: ಮಧ್ಯಪ್ರದೇಶದ ಆರ್ ಟಿ ಒ ಮಾಜಿ ಕಾನ್ ಸ್ಚೇಬಲ್ ಆಸ್ತಿ ಕೇಳಿದ್ರೆ ದಂಗು ಬೀಳುವುದು ಖಚಿತ. ಯಾಕೆಂದರೆ ಈತ ಅಕ್ರಮವಾಗಿ ಸಂಪಾದನೆ ಮಾಡಿರುವುದು ಹತ್ತು, ಇಪ್ಪತ್ತು, ಮೂವತ್ತು ಕೋಟಿ ಅಲ್ಲ. 500 ರಿಂದ 700 ಕೋಟಿ ರೂಪಾಯಿ. ಇದು ಲೋಕಾಯುಕ್ತ ಹಾಗೂ ಇಡಿ, ಜಾರಿ ನಿರ್ದೇಶನಾಲಯದ ದಾಳಿ ವೇಳೆ ಪತ್ತೆಯಾಗಿರುವುದು.
ಯಾಕೆಂದರೆ ಈತ ಅಕ್ರಮವಾಗಿ ಸಂಪಾದನೆ ಮಾಡಿರುವ ಆಸ್ತಿ ನೋಡಿ ಲೋಕಾಯುಕ್ತ ಪೊಲೀಸರೇ ದಂಗುಬಡಿಯುವಂತೆ ಮಾಡಿದೆ. ಬರೋಬ್ಬರಿ 500ರಿಂದ 700 ಕೋಟಿ ರೂಪಾಯಿ ಅಕ್ರಮ ಆಸ್ತಿ ಹೊಂದಿರುವುದು ಬಟಾಬಯಲಾಗಿದೆ. ಮಾಜಿ ಆರ್‌ಟಿಒ ಕಾನ್‌ಸ್ಟೆಬಲ್ ನ ಭ್ರಷ್ಟಾಚಾರಾವತಾರ ಈಗ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿದೆ.
ಸೌರಭ್ ಶರ್ಮಾ ಎಂಬಾತನೇ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಭ್ರಷ್ಟ. ಸದ್ಯಕ್ಕೆ ಪರಾರಿಯಾಗಿರುವ ಆತನ ಹುಡುಕಾಟಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಧ್ಯಪ್ರದೇಶದ ಲೋಕಾಯುಕ್ತ, ಐಟಿ ಇಲಾಖೆ ಮತ್ತು ಇಡಿಯಿಂದ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾನೆ. ಕಾನೂನುಬದ್ಧ ಆದಾಯಕ್ಕೆ ಅಪಾರ ಪ್ರಮಾಣದ ಆಸ್ತಿಯನ್ನು ಸಂಗ್ರಹಿಸಿದ್ದಾನೆ.
2024ರ ಡಿಸೆಂಬರ್ 20ರಂದು ಮಧ್ಯಾಹ್ನದ ಸುಮಾರಿಗೆ, ಮಧ್ಯಪ್ರದೇಶದ ಭೋಪಾಲ್‌ನ ಹೊರವಲಯದಲ್ಲಿರುವ ಮೆಂಡೋರಿ ಗ್ರಾಮದ ಮಾಜಿ ಸರಪಂಚ್, ಇಬ್ಬರು ವ್ಯಕ್ತಿಗಳು ತಮ್ಮ ಜಮೀನಿನ ಪಕ್ಕದಲ್ಲಿ ಇನ್ನೋವಾ ಕಾರನ್ನು ನಿಲ್ಲಿಸುವುದನ್ನು ನೋಡಿದರು. ಭೋಪಾಲ್‌ನ ಹಲವಾರು ಶ್ರೀಮಂತ ಕುಟುಂಬಗಳು ಮತ್ತು ಉದ್ಯಮಿಗಳು ತಮ್ಮ ತೋಟದ ಮನೆಗಳನ್ನು ಹೊಂದಿರುವುದರಿಂದ ಗ್ರಾಮದಲ್ಲಿ ಎಸ್‌ಯುವಿಯನ್ನು ಗುರುತಿಸುವುದು ಅಸಾಮಾನ್ಯವೇನಲ್ಲ, ಆದ್ರೆ,, ಸೌರಬ್ ನ ಮನೆ ಅರಮನೆಯಂತಿತ್ತು. ಮನೆಯೊಳಗೆ ಕಾಲಿಟ್ಟ ಅಧಿಕಾರಿಗಳು ಶಾಕ್ ಆದರು. ಯಾಕೆಂದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದ. ಮನೆಯೊಳಗೆ ಎಲ್ಲವೂ ಫಾರಿನ್ ವಸ್ತುಗಳೇ.
ಭೋಪಾಲ್‌ನ ರಾತಿಬಾದ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡ ನಗದು ಹಾಗೂ ಆಸ್ತಿ, ಚಿನ್ನಾಭರಣ ಕೇಳಿ ರಾಜಕಾರಣಿಗಳೇ ಶಾಕ್ ಆಗಿದ್ದಾರೆ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೇಬಲ್‌ಗೆ ಸೇರಿದ ಸುಮಾರು 52 ಕೆಜಿ ಚಿನ್ನ ಮತ್ತು 10 ಕೋಟಿ ರೂಪಾಯಿ ನಗದು ಹಣವನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ. ಸೌರಭ್ ಶರ್ಮಾ ಎಂದು ಗುರುತಿಸಲಾದ ಆರೋಪಿಯು ಪರಾರಿಯಾಗಿದ್ದಾನೆ. ಆತನ ಸಹಚರರಾದ ಚೇತನ್ ಸಿಂಗ್ ಗೌರ್ ಮತ್ತು ಶರದ್ ಜೈಸ್ವಾಲ್ ಶರ್ಮಾ ತಲೆಮರೆಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಜಿತೇಂದ್ರ ಪಟ್ವಾರಿ, ಭ್ರಷ್ಟಾಚಾರದ ಆಪಾದಿತ ನಂಟನ್ನು ಬಯಲಿಗೆಳೆಯಬಹುದಾದ ಶರ್ಮಾ ಅವರ ಡೈರಿಯು ಆರೋಪಿಗಳೊಂದಿಗೆ ನಾಪತ್ತೆಯಾಗಿದೆ ಎಂದು ಆರೋಪಿಸಿದರು.
“ಸೌರಭ್ ಶರ್ಮಾ ಅವರ ಜೀವಕ್ಕೆ ಅಪಾಯವಿದೆ. ಐಟಿ, ಲೋಕಾಯುಕ್ತ ಅಥವಾ ಇಡಿ ಡೈರಿಯ ಅಸ್ತಿತ್ವವನ್ನು ಒಪ್ಪಿಕೊಂಡಿಲ್ಲ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ, ”ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಪಟ್ವಾರಿ ಅವರು ಭ್ರಷ್ಟಾಚಾರದಿಂದ ಗುರುತಿಸಲ್ಪಟ್ಟ ಕಾಂಗ್ರೆಸ್‌ನ 15 ತಿಂಗಳ ಸರ್ಕಾರವನ್ನು ನೆನಪಿಸಿಕೊಳ್ಳುತ್ತಿರುವಂತೆ ತೋರುತ್ತಿದೆ ಎಂದು ಹೇಳಿದೆ.