Home ದಾವಣಗೆರೆ ಗುಳೆ ತಡೆಯಲು ಮನರೇಗಾ ಆಸರೆ: ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮಸ್ಥರಿಂದ ಮನರೇಗಾ ಉದ್ಯೋಗ ಸೃಷ್ಟಿಗೆ PDOಗೆ ಮನವಿ
ದಾವಣಗೆರೆಬೆಂಗಳೂರು

ಗುಳೆ ತಡೆಯಲು ಮನರೇಗಾ ಆಸರೆ: ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮಸ್ಥರಿಂದ ಮನರೇಗಾ ಉದ್ಯೋಗ ಸೃಷ್ಟಿಗೆ PDOಗೆ ಮನವಿ

Share
ಚನ್ನಗಿರಿ
Share

ದಾವಣಗೆರೆ: ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮದಲ್ಲಿ ಸಮರ್ಪಕ ಹಾಗೂ ಪರಿಣಾಮಕಾರಿ ಗ್ರಾಮಸಭೆ ನಡೆಸುವುದರ ಜೊತೆಗೆ, ಸ್ಥಳೀಯ ಕಾರ್ಮಿಕರಿಗೆ ಮನರೇಗಾ ಯೋಜನೆಯಡಿ ಕೆಲಸ ಒದಗಿಸುವಂತೆ ಒತ್ತಾಯಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ವತಿಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತಿಯ ದಾವಣಗೆರೆ ಜಿಲ್ಲಾಧ್ಯಕ್ಷ ಜಾಫರ್, “ಗ್ರಾಮಸಭೆಯು ಗ್ರಾಮಸ್ಥರ ಕುಂದುಕೊರತೆಗಳನ್ನು ಚರ್ಚಿಸಿ, ಅಭಿವೃದ್ಧಿ ಯೋಜನೆ ರೂಪಿಸುವ ಮುಖ್ಯ ವೇದಿಕೆಯಾಗಿದೆ. ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ ಮತ್ತು ಧ್ವನಿವರ್ಧಕಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಇದರಿಂದ ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ” ಎಂದರು.

ಇದೇ ವೇಳೆ ಕೃಷಿ ಹಿನ್ನಡೆ ಹಾಗೂ ಗುಳೆ ಹೋಗುವ ಸಮಸ್ಯೆಯ ಕುರಿತು ಮಾತನಾಡಿದ ಅವರು, “ಪ್ರಸ್ತುತ ನೀರಿನ ಅಭಾವದಿಂದ ಬತ್ತದ ನಾಟಿ ಕಾರ್ಯಕ್ಕೆ ತೊಂದರೆಯಾಗಿದ್ದು, ಕೃಷಿ ಕೆಲಸಗಳು ಸಿಗುತ್ತಿಲ್ಲ. ಈ ಅವಧಿಯಲ್ಲಿ ಕಾರ್ಮಿಕರು ಕೆಲಸಕ್ಕಾಗಿ ಬೇರೆಡೆ ಗುಳೆ ಹೋಗುವುದನ್ನು ತಡೆಯಲು, ಸ್ಥಳೀಯವಾಗಿಯೇ MGNREGA ಯೋಜನೆಯಡಿ ಕೆಲಸ ಒದಗಿಸಿ ಆರ್ಥಿಕ ಭದ್ರತೆ ಕಲ್ಪಿಸುವುದು ಅತ್ಯಗತ್ಯ” ಎಂದು ಆಗ್ರಹಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಒಗೂಡಿ ಶ್ರಮಿಸಿದಾಗ ಮಾತ್ರ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ ಸಮಿತಿಯು, ನವಿಲೇಹಾಳ ಗ್ರಾಮದ ಪ್ರಗತಿಗೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿತು. ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ೧೫ರಿಂದ ೨೦ಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *