Home ದಾವಣಗೆರೆ “ಸಿಹಿ ಅಂಗಡಿಯಲ್ಲಿದ್ದು ಹಸಿವಿನಿಂದ ಇರುವುದು ಬೇಸರ”: ಪತ್ನಿ ಸುನೀತಾ ಆರೋಪಿಸಿದ್ದ ಸೀಕ್ರೆಟ್ ಅಫೇರ್ಸ್ ಬಗ್ಗೆ ಬಾಲಿವುಡ್ ನಟ ಗೋವಿಂದ ಶಾಕಿಂಗ್ ಉತ್ತರ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

“ಸಿಹಿ ಅಂಗಡಿಯಲ್ಲಿದ್ದು ಹಸಿವಿನಿಂದ ಇರುವುದು ಬೇಸರ”: ಪತ್ನಿ ಸುನೀತಾ ಆರೋಪಿಸಿದ್ದ ಸೀಕ್ರೆಟ್ ಅಫೇರ್ಸ್ ಬಗ್ಗೆ ಬಾಲಿವುಡ್ ನಟ ಗೋವಿಂದ ಶಾಕಿಂಗ್ ಉತ್ತರ!

Share
ಗೋವಿಂದ
Share

ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದ, ತಮ್ಮ ಪತ್ನಿ ಸುನೀತಾ ಅಹುಜಾ ಅವರು ಮಾಡಿದ್ದ ಪರಸ್ತ್ರೀ ಸಂಬಂಧ ಹಾಗೂ ಅಫೇರ್ ಆರೋಪಗಳ ಕುರಿತು ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಪತ್ನಿ ಮಾಡುವ ಪ್ರತಿಯೊಂದು ಟೀಕೆ ಮತ್ತು ಆರೋಪಗಳನ್ನು ತಾವು ಪ್ರೀತಿಯಿಂದಲೇ ಸ್ವೀಕರಿಸುವುದಾಗಿ ಗೋವಿಂದಾ ತಿಳಿಸಿದ್ದಾರೆ.

ಪತ್ನಿಯ ಆರೋಪ ಮತ್ತು ಗೋವಿಂದಾ ಸ್ಪಷ್ಟನೆ:

ಸಂದರ್ಶನವೊಂದರಲ್ಲಿ ಮಾತನಾಡಿದ ಗೋವಿಂದಾ, “ಆಕೆ ನನ್ನನ್ನು ಪ್ರೀತಿಯಿಂದಲೇ ಬಯ್ಯುತ್ತಾಳೆ, ನಾನು ಅದನ್ನು ನಗುತ್ತಲೇ ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ. ತಮ್ಮ ಕುಟುಂಬ ಹಾಗೂ ಮಕ್ಕಳ ಬೆಳೆವಣಿಗೆಯಲ್ಲಿ ಸುನೀತಾ ಅವರ ಪಾತ್ರ ದೊಡ್ಡದಿದೆ ಎಂದು ಶ್ಲಾಘಿಸಿದ ಅವರು, “ಕೆಲವೊಮ್ಮೆ ಪ್ರಚಾರಕ್ಕಾಗಿ ಅಥವಾ ದೂರ ಉಳಿಯಲು ಆರೋಪಗಳನ್ನು ಮಾಡುವುದು ಸುಲಭ, ಆದರೆ ಸುನೀತಾ ನನ್ನನ್ನು ನಾಲ್ಕು ಬಾರಿ ಹೊಗಳಿ ನಂತರ ನಿಂದಿಸುತ್ತಾಳೆ. ಅದರಲ್ಲಿಯೂ ನನಗೆ ಪ್ರೀತಿಯೇ ಕಾಣಿಸುತ್ತದೆ” ಎಂದಿದ್ದಾರೆ.

“ಸಿಹಿ ಅಂಗಡಿಯಲ್ಲಿದ್ದು ಹಸಿವಿನಿಂದ ಇರುವುದು ಬೇಸರ”

ತಮ್ಮ ಹಳೆಯ ದಿನಗಳ ಅಫೇರ್ ವದಂತಿಗಳ ಕುರಿತು ಹಾಸ್ಯಾಸ್ಪದವಾಗಿ ಮಾತನಾಡಿದ ನಟ, “ನಾನು 34 ವರ್ಷ ವಯಸ್ಸಿನವರೆಗೆ ಬಹಳ ಸಜ್ಜನನಾಗಿದ್ದೆ. ಕೆಲವೊಮ್ಮೆ ಸಿಹಿ ಅಂಗಡಿಯಲ್ಲಿದ್ದುಕೊಂಡು (ಮಿಠಾಯಿ ಶಾಪ್) ಹಸಿವಿನಿಂದಲೇ ಹೊರಬಂದರೆ ಎಷ್ಟು ಬೇಸರವಾಗುತ್ತದೆ ಅಲ್ಲವೇ?” ಎಂದು ಮಾರ್ಮಿಕವಾಗಿ ಉದಾಹರಿಸಿದ್ದಾರೆ. ಜೊತೆಗೆ, ತಮ್ಮ ಸಹನಟಿಯರೊಂದಿಗೆ ತಮಗಿದ್ದ ಕೆಮಿಸ್ಟ್ರಿ ಹಾಗೂ ಪ್ರೀತಿಯ ಸೌಹಾರ್ದತೆಯೇ ಸಿನಿಮಾಗಳ ಯಶಸ್ಸಿಗೆ ಕಾರಣವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ತಾಯಿ ನಿರ್ಮಲಾ ದೇವಿ ಅವರು ಕೂಡ ತಮ್ಮ ಕೆಲಸ ಮತ್ತು ನಾಯಕಿಯರೊಂದಿಗಿನ ಉತ್ತಮ ಬಾಂಧವ್ಯವನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ಗೋವಿಂದಾ ನೆನಪಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles