Home ಕ್ರೈಂ ನ್ಯೂಸ್ ನೀಟ್ ಹೋರಾಟ ಸಾಮೂಹಿಕ ಅತ್ಯಾಚಾರಕ್ಕೆ ದಾರಿ ಮಾಡಿಕೊಡುತ್ತೆ, ಯುವತಿಯರು ಇಷ್ಟಪಡೋದು ಇದನ್ನೇ: ವಿವಾದಾತ್ಮಕ ಹೇಳಿಕೆ ನೀಡಿದ RSS ವಿಚಾರವಾದಿ ಟಿಜಿ ಮೋಹನ್‌ದಾಸ್ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನೀಟ್ ಹೋರಾಟ ಸಾಮೂಹಿಕ ಅತ್ಯಾಚಾರಕ್ಕೆ ದಾರಿ ಮಾಡಿಕೊಡುತ್ತೆ, ಯುವತಿಯರು ಇಷ್ಟಪಡೋದು ಇದನ್ನೇ: ವಿವಾದಾತ್ಮಕ ಹೇಳಿಕೆ ನೀಡಿದ RSS ವಿಚಾರವಾದಿ ಟಿಜಿ ಮೋಹನ್‌ದಾಸ್ ಬಂಧನ!

Share
ನೀಟ್
Share

ಕೊಚ್ಚಿ: ದೆಹಲಿಯಲ್ಲಿ ನಡೆದ ನೀಟ್ ( NEET) ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ವಿದ್ಯಾರ್ಥಿನಿಯರ ಕುರಿತು ಅತ್ಯಂತ ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಲಪಂಥೀಯ ಚಿಂತಕ ಹಾಗೂ ಆರ್‌ಎಸ್‌ಎಸ್ ಮುಖಂಡ ಟಿ.ಜಿ. ಮೋಹನ್‌ದಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಿರುವನಂತಪುರಂ ನಗರ ಸೈಬರ್ ಕ್ರೈಮ್ ಪೊಲೀಸ್ ತಂಡವು ಮಲಬಾರ್ ಕೊಚ್ಚಿಯ ಮಟ್ಟಾಂಚೇರಿಯ ಕೂವಪ್ಪಾಡಂನಲ್ಲಿರುವ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಈ ವೇಳೆ ಸ್ಥಳೀಯ ಪೊಲೀಸರು ಕೂಡ ಉಪಸ್ಥಿತರಿದ್ದರು.

ವಿವಾದಕ್ಕೆ ಕಾರಣವೇನು?

ಟಿ.ಜಿ. ಮೋಹನ್‌ದಾಸ್ ನಡೆಸುತ್ತಿರುವ ‘ಪತ್ರಿಕಾ’ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಸಾರ್ವಜನಿಕ ಶಾಂತಿಗೆ ಭಂಗ ತರಲು ಮತ್ತು ಸಮಾಜದಲ್ಲಿ ಭಯ ಹಾಗೂ ಉದ್ವಿಗ್ನತೆಯನ್ನು ಸೃಷ್ಟಿಸಲು ಯತ್ನಿಸಿದೆ ಎಂಬ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಯೂಟ್ಯೂಬ್ ವೀಡಿಯೋ ಒಂದರಲ್ಲಿ ಮಾತನಾಡಿದ್ದ ಅವರು, ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆಯು ‘ಗ್ಯಾಂಗ್ ರೇಪ್’ (ಸಾಮೂಹಿಕ ಅತ್ಯಾಚಾರ) ಘಟನೆಗಳಿಗೆ ದಾರಿ ಮಾಡಿಕೊಡಬಹುದು ಹಾಗೂ ‘ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಕೆಲವರು ಅತ್ಯಾಚಾರವನ್ನು ಇಷ್ಟಪಡುತ್ತಾರೆ’ ಎಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ತಮಗೆ ಅಧಿಕಾರವಿದ್ದರೆ ಕರ್ಫ್ಯೂ ವಿಧಿಸಿ, ಪ್ರತಿಭಟನಾಕಾರರು ಚದುರದಿದ್ದರೆ “ಗುಂಡು ಹಾರಿಸಲು ಆದೇಶಿಸುತ್ತಿದ್ದೆ” ಎಂದೂ ಅವರು ಹೇಳಿಕೆ ನೀಡಿದ್ದರು.

ಇದಲ್ಲದೆ ಘಟನೆಗೆ ಬಳಸಲಾದ ಡಿಜಿಟಲ್ ಉಪಕರಣಗಳು ಹಾಗೂ ಯೂಟ್ಯೂಬ್ ಖಾತೆಯ ಮಾಹಿತಿಯನ್ನು ಸೈಬರ್ ಪೊಲೀಸರು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles