Home ಕಾಂಗ್ರೆಸ್ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದಕ್ಷಿಣ ಭಾರತದಲ್ಲಿ ಸಾಧ್ಯವಾಯಿತಾ? ಇಲ್ಲವಲ್ವ: ಸಿಎಂ ಡಿ. ಕೆ. ಶಿವಕುಮಾರ್
Homeದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದಕ್ಷಿಣ ಭಾರತದಲ್ಲಿ ಸಾಧ್ಯವಾಯಿತಾ? ಇಲ್ಲವಲ್ವ: ಸಿಎಂ ಡಿ. ಕೆ. ಶಿವಕುಮಾರ್

Share
Share

ಬೆಂಗಳೂರು: “ನಮ್ಮ ಗುರಿ 2028 ಹಾಗೂ 2029 ಆಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಕೆಲವು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲಿ ಸಾಧ್ಯವಾಯಿತಾ? ಇಲ್ಲ” ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು. 

ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕ್ವಿಟ್ ಇಂಡಿಯಾ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬೆಳಗಾವಿ ಅಧಿವೇಶನದ ಶತಮಾನೋತ್ಯಸ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ಅದರ ನೆನಪಿನಲ್ಲಿ ನಾವು 100 ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ಜಾಗ ಪಡೆಯಲಾಗಿದೆ. ನಾವು ಬಿಜೆಪಿಯವರಂತೆ ನೂರಾರು ಎಕರೆ ಪಡೆದಿಲ್ಲ. ನಮ್ಮ ಪಾಲಿಗೆ ಕಾಂಗ್ರೆಸ್ ಕಚೇರಿ, ಇಂದಿರಾ ಭವನ, ರಾಜೀವ್ ಭವನ, ಪ್ರಿಯದರ್ಶಿನಿ ಭವನ ದೇವಾಲಯ ಸ್ವರೂಪ. ಹೀಗಾಗಿ ಕಾಂಗ್ರೆಸ್ ಕಚೇರಿಗೆ ಹೊಸರೂಪ ನೀಡಲು ಮುಂದಾಗಿದ್ದೇವೆ. ಸಧ್ಯದಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಭವನ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಆ ದಿನ ನೂರು ಕಚೇರಿ ನಿರ್ಮಾಣ ಮಾಡುವ ಜಾಗದಲ್ಲಿ ಕಾರ್ಯಕ್ರಮ ಮಾಡಲಾಗುವುದು. ಅಂದು ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ನೂರು ಜನ ಹಿರಿಯ ನಾಯಕರನ್ನು (70 ವರ್ಷ ಮೇಲ್ಪಟ್ಟವರು) ಗುರುತಿಸಿ ಅವರಿಗೆ ಸನ್ಮಾನ ಮಾಡಬೇಕಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಅಧಿಕಾರ ಸಿಕ್ಕಿಲ್ಲ. ನನ್ನಂತೆ, ಸಚಿವರುಗಳಂತೆ, ಸಿದ್ದರಾಮಯ್ಯನವರಂತೆ ಎಲ್ಲರು ಅದೃಷ್ಟಶಾಲಿಗಳಾಗಲು ಸಾಧ್ಯವಾಗಿಲ್ಲ ಎಂದರು.

ಅನೇಕ ಕಾರ್ಯಕರ್ತರಿಗೆ ಸಣ್ಣ ಅಧಿಕಾರವನ್ನು ಕೊಡಲು ಆಗಿಲ್ಲ. ಈ ಪಕ್ಷ ಉಳಿದುಕೊಂಡಿರುವುದು ಈ ಕಾರ್ಯಕರ್ತರಿಂದ. ಪಕ್ಷಕ್ಕೆ ಭೂಮಿ ದಾನ ಮಾಡಿರುವವರು, ಹಣ ಕೊಟ್ಟಿರುವವರಿಗೆ ಗೌರವ ಸಲ್ಲಿಸಲು ತೀರ್ಮಾನಿಸದ್ದೇವೆ. ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles