Home ಕ್ರೈಂ ನ್ಯೂಸ್ ಮ್ಯಾಟ್ರಿಮೋನಿ, ಪೇಪರ್ ಆಡ್ ನೀಡಿ ಯುವತಿಯರಿಗೆ ಖೆಡ್ಡಾ: ಮದುವೆ ಹೆಸರಲ್ಲಿ 25ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂ. ವಂಚಿಸಿದ್ದ ‘ಖತರ್ನಾಕ್ ವರ’ ಬಿಎಂಡಬ್ಲ್ಯೂ ಕಾರು ಸಮೇತ ಸೆರೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮ್ಯಾಟ್ರಿಮೋನಿ, ಪೇಪರ್ ಆಡ್ ನೀಡಿ ಯುವತಿಯರಿಗೆ ಖೆಡ್ಡಾ: ಮದುವೆ ಹೆಸರಲ್ಲಿ 25ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂ. ವಂಚಿಸಿದ್ದ ‘ಖತರ್ನಾಕ್ ವರ’ ಬಿಎಂಡಬ್ಲ್ಯೂ ಕಾರು ಸಮೇತ ಸೆರೆ!

Share
ಮದುವೆ
Share

ಮೀರಾ ಭಯಂದರ್: ಮದುವೆಯಾಗುವುದಾಗಿ ನಂಬಿಸಿ 25ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಆರೋಪಿಯನ್ನು ಮೀರಾ ಭಯಂದರ್ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಕೋಟಿ ಮೌಲ್ಯದ ಬಿಎಂಡಬ್ಲ್ಯೂ X1 (BMW X1) ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ತಾನು ಅವಿವಾಹಿತನೆಂದು ಸುಳ್ಳು ಹೇಳಿ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳು ಹಾಗೂ ಪತ್ರಿಕೆಗಳ ಜಾಹೀರಾತುಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ವಿಶೇಷವಾಗಿ ವಿಚ್ಛೇದಿತರು (Divorced), ವಿಕಲಚೇತನರು ಮತ್ತು ಆರ್ಥಿಕ/ಸಾಮಾಜಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ, ನಕಲಿ ಹೆಸರು ಮತ್ತು ಗುರುತುಗಳನ್ನು ಬಳಸಿ ಅವರ ನಂಬಿಕೆ ಗಿಟ್ಟಿಸಿಕೊಳ್ಳುತ್ತಿದ್ದ.

ನಂತರ ಮದುವೆಯಾಗುವುದಾಗಿ ನಂಬಿಸಿ ಹಂತ ಹಂತವಾಗಿ ಅವರಿಂದ ಬೃಹತ್ ಪ್ರಮಾಣದ ಹಣವನ್ನು ಪಡೆದು ವಂಚಿಸುತ್ತಿದ್ದ. ಗ್ರೇಟರ್ ನೋಯ್ಡಾದಲ್ಲಿ ಅಡಗಿದ್ದ ಈತನನ್ನು ಮೀರಾ ಭಯಂದರ್ ಕ್ರೈಮ್ ಡಿಟೆಕ್ಷನ್ ಬ್ರಾಂಚ್ (ಯೂನಿಟ್-1) ಯಶಸ್ವಿಯಾಗಿ ಬಂಧಿಸಿದೆ.

ತನಿಖೆಯ ವೇಳೆ ಆರೋಪಿಯು ಸಂಕಷ್ಟದಲ್ಲಿರುವ ಮಹಿಳೆಯರ ಭಾವುಕತೆಯನ್ನು ದುರುಪಯೋಗಪಡಿಸಿಕೊಂಡು ದೇಶಾದ್ಯಂತ 25ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಂಚಿಸಿದ ಹಣದಲ್ಲೇ ಈತ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದ ಎನ್ನಲಾಗಿದೆ.

ಪ್ರಕರಣದಲ್ಲಿ ಆರೋಪಿಯ ಮಗನನ್ನೂ ಸಹ-ಆರೋಪಿಯನ್ನಾಗಿ ಸೇರಿಸಲಾಗಿದ್ದು, ಮುಖ್ಯ ಆರೋಪಿಯನ್ನು ಪ್ರಸ್ತುತ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *