Home ಕ್ರೈಂ ನ್ಯೂಸ್ ಪ್ರಿಯಕರ ನೋಡಲು ಜೈಲಿಗೆ ಬಂದ ಅಪ್ರಾಪ್ತೆ: ತಪಾಸಣೆ ವೇಳೆ ನಕಲಿ ಆಧಾರ್, ಜೇಬಿನಲ್ಲಿದ್ದವು 10 ಜೀವಂತ ಗುಂಡುಗಳು! ಮುಂದೇನಾಯ್ತು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯಕರ ನೋಡಲು ಜೈಲಿಗೆ ಬಂದ ಅಪ್ರಾಪ್ತೆ: ತಪಾಸಣೆ ವೇಳೆ ನಕಲಿ ಆಧಾರ್, ಜೇಬಿನಲ್ಲಿದ್ದವು 10 ಜೀವಂತ ಗುಂಡುಗಳು! ಮುಂದೇನಾಯ್ತು?

Share
ಪ್ರಿಯಕರ
Share

ಗೋಂಡಾ (ಉತ್ತರ ಪ್ರದೇಶ): ಪ್ರಿಯಕರನನ್ನು ಭೇಟಿಯಾಗಲು ಜೈಲಿಗೆ ಬಂದ ಅಪ್ರಾಪ್ತ ಬಾಲಕಿಯೊಬ್ಬಳ ಜೇಬಿನಲ್ಲಿ 10 ಜೀವಂತ ಗುಂಡುಗಳು  ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ವಿಭಾಗೀಯ ಜೈಲಿನಲ್ಲಿ ನಡೆದಿದೆ.

ಆಗಿದ್ದೇನು?

ಶಾಲಾ ವಿದ್ಯಾರ್ಥಿನಿಯಾಗಿರುವ ಈ ಬಾಲಕಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ಜೈಲಿನಲ್ಲಿರುವ ತನ್ನ ಪ್ರಿಯಕರ ಹರ್ಷು ಕಶ್ಯಪ್ ಎಂಬಾತನನ್ನು ಭೇಟಿಯಾಗಲು ಬಂದಿದ್ದಳು. ಜೈಲಿನ ಮುಖ್ಯ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳು ಕಡ್ಡಾಯ ತಪಾಸಣೆ ನಡೆಸುವಾಗ ಬಾಲಕಿ ನಕಲಿ ಆಧಾರ್ ಕಾರ್ಡ್ ನೀಡಿದ್ದಲ್ಲದೆ, ತಪ್ಪಾದ ಹೆಸರು ಹೇಳಿದ್ದಾಳೆ. ಅನುಮಾನಗೊಂಡ ಸಿಬ್ಬಂದಿ ಆಕೆಯ ಜೇಬು ತಪಾಸಣೆ ನಡೆಸಿದಾಗ 10 ಜೀವಂತ ಪಿಸ್ತೂಲ್ ಗುಂಡುಗಳು, ನಕಲಿ ಆಧಾರ್ ಕಾರ್ಡ್ ಹಾಗೂ ನಗದು ಹಣ ಪತ್ತೆಯಾಗಿದೆ.

ಬಾಲಕಿ ನೀಡಿದ ವಿಚಿತ್ರ ವಿವರಣೆ:

ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ನೈಜ ಗುರುತನ್ನು ಬಹಿರಂಗಪಡಿಸಿದ ಬಾಲಕಿ, “ಈ ಗುಂಡುಗಳು ನನ್ನ ತಂದೆಯ ಲೈಸೆನ್ಸ್ ಹೊಂದಿರುವ ಪಿಸ್ತೂಲ್‌ನದ್ದಾಗಿದೆ. ನನ್ನ ತಂದೆಗೆ ಸಿಟ್ಟು ಹೆಚ್ಚು. ನಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ತಿಳಿದರೆ ಕೋಪದಲ್ಲಿ ಯಾವುದಾದರೂ ಅನಾಹುತ ಮಾಡಿಕೊಳ್ಳಬಹುದು ಎಂಬ ಭಯದಿಂದ, ಮನೆಯಲ್ಲಿದ್ದ ಗನ್‌ನಿಂದ ಗುಂಡುಗಳನ್ನು ತೆಗೆದು ನನ್ನ ಜೇಬಿನಲ್ಲಿಟ್ಟುಕೊಂಡು ಬಂದಿದ್ದೆ” ಎಂದು ಹೇಳಿಕೆ ನೀಡಿದ್ದಾಳೆ.

ಸದ್ಯ ಜೈಲು ಅಧಿಕಾರಿಗಳು ಬಾಲಕಿ ಹಾಗೂ ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಔಟ್‌ಪೋಸ್ಟ್ ಇನ್‌ಚಾರ್ಜ್‌ಗೆ ಒಪ್ಪಿಸಿದ್ದು, ಪ್ರಕರಣ ಸಂಬಂಧ ಎಫ್‌ಐಆರ್ (FIR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *