Home ದಾವಣಗೆರೆ ಅನುಮಾನದ ಕಿಚ್ಚಿಗೆ 5 ವರ್ಷದ ಪ್ರೀತಿ ಬಲಿ: ಯುವತಿಯನ್ನು ಭೀಕರವಾಗಿ ಕೊಂದು ಶವ ಸುಟ್ಟುಹಾಕಿದ ಪ್ರಿಯಕರ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿ

ಅನುಮಾನದ ಕಿಚ್ಚಿಗೆ 5 ವರ್ಷದ ಪ್ರೀತಿ ಬಲಿ: ಯುವತಿಯನ್ನು ಭೀಕರವಾಗಿ ಕೊಂದು ಶವ ಸುಟ್ಟುಹಾಕಿದ ಪ್ರಿಯಕರ!

Share
ಯುವತಿ
Share

ಪಲ್ನಾಡು: ಪ್ರೀತಿಯಲ್ಲಿ ಮೂಡಿದ ಸಣ್ಣದೊಂದು ‘ಅನುಮಾನ’ 5 ವರ್ಷಗಳ ಸುಂದರ ಬಾಂಧವ್ಯವನ್ನು ಭೀಕರವಾಗಿ ಅಂತ್ಯಗೊಳಿಸಿರುವ ದಾರುಣ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ. ಪ್ರಿಯತಮನೇ ಯುವತಿಯನ್ನು ಬರ್ಬರವಾಗಿ ಕೊಂದು ಹಾಕಿದ್ದಾನೆ. 

ಚಿಲಕಲೂರಿಪೇಟೆಯ 25 ವರ್ಷದ ಶೇಕ್ ಹಸೀನಾ ಕೊಲೆಯಾದ ದುರ್ದೈವಿ. ಗುಂಟೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಜಿಲುಗು ಬಾಲ ಸೈದುಲು ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ.

ಘಟನೆಯ ವಿವರ:

ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ಜೀವನ ಸಾಗುತ್ತಿತ್ತು. ಆದರೆ ಇತ್ತೀಚೆಗೆ ಹಸೀನಾ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಹುಚ್ಚು ಅನುಮಾನ ಆರೋಪಿ ಸೈದುಲು ಮನಸ್ಸಿನಲ್ಲಿ ಮೂಡಿತ್ತು. ಈ ಅನುಮಾನವೇ ಆತನನ್ನು ಕೊಲೆಗಡುಕನನ್ನಾಗಿ ಮಾಡಿದೆ.

ಮಾತನಾಡೋಣ ಎಂದು ನಂಬಿಸಿ ಹಸೀನಾಳನ್ನು ನಾಗಾರ್ಜುನ ಸಾಗರ ಬಲದಂಡೆ ಕಾಲುವೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಮಾತಿಗೆ ಮಾತು ಬೆಳೆದು, ಆಕ್ರೋಶಗೊಂಡ ಸೈದುಲು ಹಸೀನಾ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತಂದಿದ್ದ ಪೆಟ್ರೋಲ್ ಸುರಿದು ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾನೆ.

ಪೊಲೀಸ್ ತನಿಖೆ:

ಹಸೀನಾ ನಾಪತ್ತೆಯಾದ ಹಿನ್ನೆಲೆಯಲ್ಲಿ ಚಿಲಕಲೂರಿಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇತ್ತ ಕಾಲುವೆ ದಡದಲ್ಲಿ ಸುಟ್ಟುಹೋಗಿದ್ದ ಕುರುಹುಗಳನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾಲ್ ಡೇಟಾ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿ, ಆರೋಪಿ ಜಿಲುಗು ಬಾಲ ಸೈದುಲುನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಎಸಗಿದ ದಾರುಣ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

Share

Leave a comment

Leave a Reply

Your email address will not be published. Required fields are marked *

Related Articles