Home ದಾವಣಗೆರೆ ‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’: “ಕಮಿಟ್‌ಮೆಂಟ್ ಕೊಟ್ರೆ ಮಾತ್ರ ಚಾನ್ಸ್” ಎಂದಿದ್ದ ಪ್ರೊಡ್ಯೂಸರ್ ಬೆವರಿಳಿಸಿದ್ದ ನಟಿ ಬಿಚ್ಚಿಟ್ಟ ಕಾಸ್ಟಿಂಗ್ ಕೌಚ್ ಕರಾಳಮುಖ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’: “ಕಮಿಟ್‌ಮೆಂಟ್ ಕೊಟ್ರೆ ಮಾತ್ರ ಚಾನ್ಸ್” ಎಂದಿದ್ದ ಪ್ರೊಡ್ಯೂಸರ್ ಬೆವರಿಳಿಸಿದ್ದ ನಟಿ ಬಿಚ್ಚಿಟ್ಟ ಕಾಸ್ಟಿಂಗ್ ಕೌಚ್ ಕರಾಳಮುಖ!

Share
ನಟಿ
Share

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ (ಟಾಲಿವುಡ್) ನಾಯಕಿಯರ ಭದ್ರತೆ ಹಾಗೂ ‘ಕಾಸ್ಟಿಂಗ್ ಕೌಚ್’ (ಲೈಂಗಿಕ ದೌರ್ಜನ್ಯ) ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ನಟಿ ಚಾಂದಿನಿ ಚೌಧರಿ ನೀಡಿರುವ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿವೆ.

‘ಚಾಯ್ ಬಿಸ್ಕೆಟ್’ ಯೂಟ್ಯೂಬ್ ಚಾನೆಲ್‌ನ ‘ದಿ ಆಡಿಷನ್ ಶೋ’ನಲ್ಲಿ ಭಾಗವಹಿಸಿದ್ದ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಕಹಿ ಘಟನೆಯನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.

ಘಟನೆಯ ವಿವರ:

2015ರಲ್ಲಿ ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಚಿತ್ರೀಕರಣದ ಸಂದರ್ಭದಲ್ಲಿ, ಪ್ರಸಿದ್ಧ ಜ್ಯುವೆಲ್ಲರಿ ಬ್ರಾಂಡ್‌ಗೆ ಅಂಬಾಸಿಡರ್ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬ ನಟಿಯನ್ನು ಸಂಪರ್ಕಿಸಿದ್ದ. ನಟಿಯ ತಾಯಿಯ ಸಮ್ಮುಖದಲ್ಲಿ ಮಾತನಾಡಿದ್ದ ಆತ, ನಂತರ ಫೋನ್ ಮಾಡಿ “ನೀನು ನೋಡಲು ಅಷ್ಟೇನೂ ಚೆನ್ನಾಗಿಲ್ಲ, ಮೈಬಣ್ಣವೂ ಕಡಿಮೆ ಇದೆ. ಇಂಡಸ್ಟ್ರಿಯಲ್ಲಿ ಉಳಿಯಬೇಕಾದರೆ ‘ಕಮಿಟ್‌ಮೆಂಟ್’ (ಲೈಂಗಿಕ ರಾಜಿ) ನೀಡಬೇಕು” ಎಂದು ಪರೋಕ್ಷವಾಗಿ ಕಿರುಕುಳ ನೀಡಿದ್ದ.

ನಟಿ ಇದಕ್ಕೆ ಒಪ್ಪದಿದ್ದಾಗ ಆತ ಆಕೆಯ ತಾಯಿಗೂ ಫೋನ್ ಮಾಡಿ ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ತಾಯಿ, “ನೀನು ಆರ್ಟಿಸ್ಟ್‌ಗಳನ್ನು ಹುಡುಕುತ್ತಿದ್ದೀಯಾ ಅಥವಾ ದಲ್ಲಾಳಿ ಕೆಲಸ ಮಾಡುತ್ತಿದ್ದೀಯಾ? ಇನ್ನೊಮ್ಮೆ ಕರೆ ಮಾಡಿದರೆ ಪೊಲೀಸರಿಗೆ ಹಿಡಿದುಕೊಡುತ್ತೇವೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಘಟನೆಯ ಬಳಿಕ ಆ ವ್ಯಕ್ತಿಯು ನಟಿಯ ಬಗ್ಗೆ “ಆಕೆಗೆ ಅಹಂಕಾರ ಹೆಚ್ಚು, ಕೆಲಸ ಮಾಡಲು ಸೂಕ್ತವಲ್ಲ” ಎಂದು ಚಿತ್ರರಂಗದಲ್ಲಿ ಸುಳ್ಳು ಅಪಪ್ರಚಾರ ಹಬ್ಬಿಸಿದ್ದನು.

ಹೋಟೆಲ್‌ನಲ್ಲಿ ಎದುರಾದಾಗ ತಕ್ಕ ಉತ್ತರ:

2024ರಲ್ಲಿ ‘ಗಾಮಿ’ ಹಾಗೂ ‘ಏವಂ’ ಸಿನಿಮಾಗಳ ಪ್ರಚಾರದ ವೇಳೆ ಹೈದರಾಬಾದ್‌ನ ಹೋಟೆಲೊಂದರಲ್ಲಿ ಅದೇ ನಿರ್ಮಾಪಕ ನಟಿಯ ಬಳಿ ಬಂದಿದ್ದ. 2015ರ ಜಾಹೀರಾತು ಮಾತುಕತೆಯನ್ನು ಆತ ನೆನಪಿಸಲು ಯತ್ನಿಸಿದಾಗ, ನಟಿ ತಕ್ಷಣವೇ “ಅಂದು ನನ್ನೊಂದಿಗೆ ಮಲಗಲು (ಸೆಕ್ಸ್‌ಗೆ) ಕೇಳಿದ್ದು ನೀವೇ ತಾನೇ!” ಎಂದು ಆತನ ಮುಖಕ್ಕೆ ನೇರವಾಗಿ ಪ್ರಶ್ನಿಸಿದ್ದಾರೆ. ಇದರಿಂದ ಬೆಚ್ಚಿಬಿದ್ದ ನಿರ್ಮಾಪಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಕಹಿ ಅನುಭವಗಳೇ ತಮ್ಮ ರಕ್ಷಣೆಗೆ ‘ಡಿಫೆನ್ಸ್ ಮೆಕಾನಿಜಂ’ ರೂಪಿಸಿಕೊಳ್ಳಲು ಕಾರಣವಾಯಿತು ಎಂದಿರುವ ಚಾಂದಿನಿ, ಸದ್ಯ ಪ್ರಾಮಾಣಿಕವಾಗಿ ಕೆಲಸ ಮಾಡುವವರೊಂದಿಗೆ ಮಾತ್ರ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles