Home ಶಾಲೆಗೆ ನುಗ್ಗಿ 27 ಬಾರಿ ಚಾಕು ಇರಿದು ಶಿಕ್ಷಕಿಯ ಕೊಲೆ ಮಾಡಿದ ಸೈಕೋ: ಕಿರುಕುಳದ ದೂರು ನೀಡಿದ್ದಕ್ಕೆ ಕೃತ್ಯ!
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಶಾಲೆಗೆ ನುಗ್ಗಿ 27 ಬಾರಿ ಚಾಕು ಇರಿದು ಶಿಕ್ಷಕಿಯ ಕೊಲೆ ಮಾಡಿದ ಸೈಕೋ: ಕಿರುಕುಳದ ದೂರು ನೀಡಿದ್ದಕ್ಕೆ ಕೃತ್ಯ!

Share
ಶಾಲೆ
Share

ಫರೀದಾಬಾದ್: ಹರಿಯಾಣದ ಫರೀದಾಬಾದ್‌ನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಖಾಸಗಿ ಶಾಲೆಯೊಂದರ ಆವರಣದಲ್ಲೇ 29 ವರ್ಷದ ಶಿಕ್ಷಕಿಯನ್ನು ಭೀಕರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಸಂಪೂರ್ಣ ಕೃತ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಕ್ರೋನಾ ಗ್ರಾಮದ ಸರಸ್ವತಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧ್ಯಾ ಕೊಲೆಯಾದ ದುರ್ದೈವಿ. ಸೋಮವಾರ ಬೆಳಿಗ್ಗೆ 9:30 ರ ಸುಮಾರಿಗೆ ಮುಖಕ್ಕೆ ಬಿಳಿ ಬಟ್ಟೆ ಧರಿಸಿ ಬಂದ ಆರೋಪಿ ಅಮಿತ್ (21), ಶಿಕ್ಷಕಿಯನ್ನು ಭೇಟಿಯಾಗಬೇಕೆಂದು ಕೇಳಿಕೊಂಡಿದ್ದಾನೆ.

ಶಿಕ್ಷಕಿ ಸಂಧ್ಯಾ ಶಾಲೆಯ ಗೇಟ್ ಬಳಿ ಬರುತ್ತಿದ್ದಂತೆ, ಆರೋಪಿ ಆಕೆಯ ಮೇಲೆ ಎರಗಿ ಎಳೆದಾಡಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ 27ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಶಿಕ್ಷಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶಾಲೆಯ ಅಡ್ಮಿನ್‌ ತೇಜಪಾಲ್ ರಕ್ಷಿಸಲು ಬಂದಾಗ ಆರೋಪಿ ಅವರ ಮೇಲೆಯೂ ಚಾಕು ಬೀಸಿ ಬೆದರಿಸಿದ್ದಾನೆ.

ಕೊಲೆಗೆ ಲೈಂಗಿಕ ಕಿರುಕುಳದ ದೂರು ರೋಷ: ಆರೋಪಿ ಅಮಿತ್ ಕಳೆದ ಎರಡು ವರ್ಷಗಳಿಂದ ಸಂಧ್ಯಾ ಅವರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಕಿರುಕುಳ ತಾಳಲಾರದೆ ಸಂಧ್ಯಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಆರೋಪಿ ಬಹಿರಂಗವಾಗಿ ಕ್ಷಮೆ ಕೇಳಿದ್ದನು. ಈ ದೂರಿನ ಮೇಲಿನ ರೋಷದಿಂದಲೇ ಈ ಹತ್ಯೆ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಎರಡೇ ಗಂಟೆಗಳಲ್ಲಿ ಸೆಕ್ಟರ್ 58 ಠಾಣೆ ಪೊಲೀಸರು ಆರೋಪಿ ಅಮಿತ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *