Home ಉದ್ಯೋಗ ವಾರ್ತೆ ಪ್ರೊಫೆಸರ್, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ₹2.18 ಲಕ್ಷದವರೆಗೆ ವೇತನ! ಯಾವ ಜಿಲ್ಲೆಯಲ್ಲಿ ಉದ್ಯೋಗಾವಕಾಶ?
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಪ್ರೊಫೆಸರ್, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ₹2.18 ಲಕ್ಷದವರೆಗೆ ವೇತನ! ಯಾವ ಜಿಲ್ಲೆಯಲ್ಲಿ ಉದ್ಯೋಗಾವಕಾಶ?

Share
ಅರ್ಜಿ
Share

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು (CIMS) ಖಾಲಿ ಇರುವ ಬೋಧಕ ಹಾಗೂ ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 49 ಹುದ್ದೆಗಳು ಲಭ್ಯವಿದ್ದು, ಆಸಕ್ತರು ಆಗಸ್ಟ್ 14, 2026ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  • ಪ್ರೊಫೆಸರ್ (Professor): 01

  • ಅಸೋಸಿಯೇಟ್ ಪ್ರೊಫೆಸರ್ (Associate Professor): 06

  • ಅಸಿಸ್ಟೆಂಟ್ ಪ್ರೊಫೆಸರ್ (Assistant Professor): 40

  • ಕ್ಯಾಸುಅಲ್ಟಿ ಮೆಡಿಕಲ್ ಆಫೀಸರ್ (Casualty Medical Officer): 02

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಪಟ್ಟ ವಿಭಾಗದಲ್ಲಿ MD, MS, DNB, DrNB, MDS, M.Sc, Ph.D ಅಥವಾ MBBS ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

  • ಪ್ರೊಫೆಸರ್: ಗರಿಷ್ಠ 47 ವರ್ಷ

  • ಅಸೋಸಿಯೇಟ್ ಪ್ರೊಫೆಸರ್: ಗರಿಷ್ಠ 44 ವರ್ಷ

  • ಅಸಿಸ್ಟೆಂಟ್ ಪ್ರೊಫೆಸರ್ & ಕ್ಯಾಸುಅಲ್ಟಿ ಮೆಡಿಕಲ್ ಆಫೀಸರ್: ಗರಿಷ್ಠ 40 ವರ್ಷ (ಸರ್ಕಾರಿ ನಿಯಮಾವಳಿಗಳಂತೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ)

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಮಾಸಿಕ ₹79,800 ರಿಂದ ₹2,18,200 ರವರೆಗೆ ವೇತನ ದೊರೆಯಲಿದೆ.

ಅರ್ಜಿ ಶುಲ್ಕ & ಸಲ್ಲಿಕೆ విధాన:

  • ಅರ್ಜಿ ಶುಲ್ಕ: ₹4,000/- (ಡಿಮಾಂಡ್ ಡ್ರಾಫ್ಟ್ / DD ಮೂಲಕ ಪಾವತಿಸಬೇಕು)

  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14-ಆಗಸ್ಟ್-2026

  • ಅರ್ಜಿ ರವಾನಿಸಬೇಕಾದ ವಿಳಾಸ: The Director, Chamarajanagar Institute of Medical Sciences, Yelandur Road, Kasaba Hobli, Chamarajanagar – 571313.

ಸಂಪೂರ್ಣ ಅಧಿಸೂಚನೆ ಮತ್ತು ಅರ್ಜಿ ನಮೂನೆಗಾಗಿ ಅಧಿಕೃತ ವೆಬ್‌ಸೈಟ್ cimscrnagara.karnataka.gov.in ಗೆ ಭೇಟಿ ನೀಡಬಹುದು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles