Home ದಾವಣಗೆರೆ ಭದ್ರಾ ಜಲಾಶಯದಿಂದ ತಕ್ಷಣವೇ ನೀರು ಬಿಡುಗಡೆ ಮಾಡಿ: ಸರ್ಕಾರಕ್ಕೆ ದಾವಣಗೆರೆ ರೈತರ ಮನವಿ
ದಾವಣಗೆರೆಬೆಂಗಳೂರು

ಭದ್ರಾ ಜಲಾಶಯದಿಂದ ತಕ್ಷಣವೇ ನೀರು ಬಿಡುಗಡೆ ಮಾಡಿ: ಸರ್ಕಾರಕ್ಕೆ ದಾವಣಗೆರೆ ರೈತರ ಮನವಿ

Share
ಭದ್ರಾ ಜಲಾಶಯ
Share

ದಾವಣಗೆರೆ:ಭದ್ರಾ ಜಲಾಶಯದಿಂದ  ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ನಾಲೆಗಳಿಗೆ ತಕ್ಷಣವೇ 120 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಭದ್ರಾ ಕಾಡಾ ಸಭೆ ಕರೆಯಬೇಕೆಂದು ದಾವಣಗೆರೆ ಜಿಲ್ಲೆಯ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರೈತ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಶಾಸಕರನ್ನು ಭೇಟಿ
ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

40.5 TMC ನೀರು ಬಳಕೆಗೆ ಲಭ್ಯ:

ಪ್ರಸ್ತುತ ಭದ್ರಾ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದಲ್ಲಿ 49 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 8.5 ಟಿ.ಎಂ.ಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ, ಬಳಕೆಗೆ 40.5 ಟಿ.ಎಂ.ಸಿ ನೀರು ಲಭ್ಯವಿದೆ.
ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸೈಕ್ಲೋನ್ ಪ್ರಭಾವದಿಂದ ಮತ್ತಷ್ಟು ಮಳೆ ಬರುವ ನಿರೀಕ್ಷೆಯಿರುವುದರಿಂದ ನೀರು ಸಂಗ್ರಹಣೆ ಇನ್ನಷ್ಟು ಹೆಚ್ಚಾಗಲಿದೆ. ಹಾಗಾಗಿ ನೀರು ಹರಿಸಬೇಕು ಎಂದು ರೈತ ಮುಖಂಡರು
ಒತ್ತಾಯಿಸಿದರು.

90 ದಿನಗಳ ಬೆಳೆಗೆ ಅನುಕೂಲ:

ಈ ಹಂತದಲ್ಲಿ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದರಿಂದ ರೈತರು 90 ದಿನಗಳ ಅಲ್ಪಾವಧಿ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲು ಅನುಕೂಲವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ಭದ್ರಾ ಕಾಡಾ ಸಭೆಯನ್ನು ಕರೆದು, 120 ದಿನಗಳ ಕಾಲ
ನೀರು ಹರಿಸಲು ಆದೇಶಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ನೀರಾವರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸುವ ವೇಳೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಅಧ್ಯಕ್ಷ ಹೆಚ್. ಆರ್. ಲಿಂಗರಾಜ, ಉಪಾಧ್ಯಕ್ಷ ಎಸ್. ನಾಗರಾಜರಾವ್, ಪ್ರಧಾನ ಕಾರ್ಯದರ್ಶಿ ಎ. ಎಂ. ಮಂಜುನಾಥ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *