ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಧನಂಜಯ್ ಸರ್ಜಿ ಹೆಸರಲ್ಲಿ ವಿಷಪೂರಿತ ಎನ್ನಲಾದ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಆರೋಪಿ ಸೆರೆ: ಕೃತ್ಯದ ಹಿಂದಿದೆ ಭಗ್ನ ಪ್ರೇಮ್ ಕಹಾನಿ!

On: January 5, 2025 10:02 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-01-2025

ಶಿವಮೊಗ್ಗ: ಬಾಕ್ಸ್ ನಲ್ಲಿ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಯುವಕ ಸಿಕ್ಕಿಬಿದ್ದಿದ್ದಾನೆ.

ಯುವ ವಕೀಲ ಸೌಹಾರ್ದ ಪಟೇಲ್ ಬಂಧಿತ ಆರೋಪಿ. ಶಿವಮೊಗ್ಗದ ಇಬ್ಬರು ವೈದ್ಯರು ಹಾಗೂ ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿಯವರಿಗೆ ಧನಂಜಯ್ ಸರ್ಜಿ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ. ಅದರಲ್ಲಿ ವಿಷ ಸೇರಿಸಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಶಿವಮೊಗ್ಗ ಎಸ್ಪಿ ಜಿ. ಕೆ. ಮಿಥುನ್ ಕುಮಾರ್ ಅವರಿಗೆ ದೂರು ಸಲ್ಲಿಸಲಾಗಿತ್ತು. ಧನಂಜಯ್ ಸರ್ಜಿ, ಶಾಸಕ ಚನ್ನಬಸಪ್ಪ, ದತ್ತಾತ್ರಿ ಒಳಗೊಂಡಂತೆ ಬಿಜೆಪಿ ನಾಯಕರು ಪ್ರಕರಣ ಗಂಭೀರವಾಗಿ ಪರಿಗಣಿಸಿ ಆರೋಪಿ ಬಂಧಿಸುವಂತೆ ಒತ್ತಾಯಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ತನಿಖೆಗಾಗಿ ಕೋಟೆ ಠಾಣೆಯ ಇನ್ ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಹರೀಶ್ ಪಟೇಲ್ ಒಳಗೊಂಡ ತಂಡ ಈ ಪ್ರಕರಣದ ಹಿಂದಿದ್ದ ಸೌಹಾರ್ದ ಪಟೇಲ್ ಎನ್ನುವ ಯುವ ವಕೀಲ ಪದವೀಧರನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಸೌಹಾರ್ದ್ ಪಟೇಲ್ ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದು ಆ ಸಮಯದಲ್ಲಿ ಇದನ್ನು ಗಮನಿಸಿದ ಎನ್ ಇ ಎಸ್ ಸಂಸ್ಥೆಯ ಸೆಕ್ರೆಟರಿ ನಾಗರಾಜ್ ಹಾಗೂ ಕೆಲವರು ಸೇರಿ ಬುದ್ಧಿವಾದ ಹೇಳಿ ಅವರ ತಂದೆ ತಾಯಿ ಹತ್ತಿರ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನೋಡಿಕೊಂಡಿದ್ದರು ಆ ನಂತರ ಹುಡುಗಿ ಬೇರೆ ಒಬ್ಬರ ಜೊತೆ ಮದುವೆಯಾದಾಗ ಈತನಿಗೆ ಇವರ ಮೇಲೆ ದ್ವೇಷ ಶುರುವಾಯಿತು. ಡಾಕ್ಟರ್ ಸರ್ಜಿ ಅವರ ಸಾಮಾಜಿಕ ಜಾಲತಾಣದ ಅಭಿಮಾನಿಯಾದ ಸೌಹಾರ್ದ ಪಟೇಲ್ ಸರ್ಜಿ ಅವರ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದ.

ಅವರನ್ನು ಎಲ್ಲಾ ಹಂತದಲ್ಲೂ ಫಾಲೋ ಮಾಡುತ್ತಿದ್ದ. ಧನಂಜಯ್ ಸರ್ಜಿ ಅವರ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ. ನಂತರ ಕುವೆಂಪು ರಂಗಮಂದಿರದಲ್ಲಿ ಎನ್ ಇ‌ ಎಸ್ ಕಾಲೇಜು ಸೆಕ್ರೆಟರಿ ನಾಗರಾಜ್ ಹಾಗೂ ಡಾ. ಸರ್ಜಿ
ಅವರು ಒಂದೇ ವೇದಿಕೆಯಲ್ಲಿ ಭಾಷಣ ಮಾಡುವುದನ್ನು ಕೇಳಿಸಿಕೊಂಡಿದ್ದ.

ಈತನಿಗೆ ಚಿಕಿತ್ಸೆಗೆಂದು ನೀಡುತ್ತಿದ್ದ ವೈದ್ಯರು ನೀಡಿದ ಮಾತ್ರೆಗಳನ್ನು ಆ ಸ್ವೀಟ್ ಗೆ ಮಿಕ್ಸ್ ಮಾಡಿ ಡಾಕ್ಟರ್ ಸರ್ಜಿ ಅವರ ಹೆಸರಿನಲ್ಲಿ ಈ ಸ್ವೀಟ್ ಅನ್ನು ಕಳುಹಿಸಿದರೆ, ಇಬ್ಬರು ವೈದ್ಯರು ಹಾಗೂ ಸೆಕ್ರೆಟರಿ ತಿನ್ನುತ್ತಾರೆ ಎಂದು ನಂಬಿಕೊಂಡು
ಅದನ್ನು ಕಳುಹಿಸಿದ್ದಾನೆ. ಆದರೆ ನಿಜವಾಗಲೂ ಅದರಲ್ಲಿ ಮಾತ್ರೆ ಮಿಕ್ಸ್ ಮಾಡಿದ್ದಾನ.? ಅಥವಾ ಬೇರೆ ಏನಾದರೂ ಹಾಕಿದ್ದಾನ..? ಎನ್ನುವುದನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಶಿವಮೊಗ್ಗ ಎಸ್ಪಿ ತಿಳಿಸಿದ್ದಾರೆ.

ಸೌಹಾರ್ದ ಪಟೇಲ್ ವಿರುದ್ಧ ಕೇಸ್:

ಮೂಲತಃ ಶಿವಮೊಗ್ಗದ ವಾಸಿಯಾಗಿದ್ದು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಮಾಡಿರುವ ಸೌಹಾರ್ದ ಪಟೇಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 123 ರ ಅಡಿಯಲ್ಲಿ ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪ ಸಾಬೀತಾದರೆ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment